ಕುಂಬಳೆ ಉಪಜಿಲ್ಲಾ  ಶಾಲಾ ಕಲೋತ್ಸವಕ್ಕೆ ಬದಿಯಡ್ಕದಲ್ಲಿ ಚಾಲನೆ

ಬದಿಯಡ್ಕ:  ಪೆರಡಾಲ ನವ ಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದಿ ನಿಂದ ಆರಂಭ ಗೊಂಡ ಕುಂಬಳೆ ಉಪ ಜಿಲ್ಲಾ ಶಾಲಾ ಕಲೋತ್ಸವಕ್ಕೆ  ಇಂದು ಬೆಳಿಗ್ಗೆ ಶಾಲಾ ಮೆನೇಜ್ ಮೆಂಟ್ ಕಮಿಟಿ ಜೊತೆ ಕಾರ್ಯದರ್ಶಿ ರಮೇಶ್ ಕುಂಡ್ಯಪ್ಪಾಡಿ ಧ್ವಜಾರೋಹಣ ಗೈದರು.   ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ.ಶಂಕರ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಶಾಲಾ ಪಿಟಿಎ ಅಧ್ಯಕ್ಷ ಹಮೀದ್ ಕೆಡೆಂಜಿ, ಎಇಒ ಅಶೋಕ್, ಮುಖ್ಯೋಪಾಧ್ಯಾ ಯಿನಿ ಶಾಹಿದಾ ಟೀಚರ್, ಪ್ರಾಂಶುಪಾಲ ಶ್ರೀಕೃಷ್ಣ, ಕಾರ್ಯಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.  ಇಂದು, ನಾಳೆ ವೇದಿಕೇ ತರ ಸ್ಪರ್ಧೆಗಳು, ನವಂಬರ್ 2, 3, 4ರಂದು ವೇದಿಕೆ ಸ್ಪರ್ಧೆಗಳು ನಡೆಯಲಿದೆ.

RELATED NEWS

You cannot copy contents of this page