ಹಿರಿಯ ಲಾರಿ ಚಾಲಕ ವಿಕ್ಟರ್ ಡಿ’ಸೋಜಾ ನಿಧನ

ನಾರಂಪಾಡಿ: ನಾರಂಪಾಡಿ ನಿವಾಸಿ, ಹಿರಿಯ ಲಾರಿ ಚಾಲಕ ವಿಕ್ಟರ್ ಡಿ’ಸೋಜಾ (75) ನಿನ್ನೆ ಸ್ವಗೃಹದಲ್ಲಿ ನಿಧನ ಹೊಂದಿದರು. ನಾರಂಪಾಡಿಯಲ್ಲಿ ಹಲವು ವರ್ಷಗಳಿಂದ ಲಾರಿ ಚಾಲಕನಾಗಿದ್ದ ಇವರು ಡ್ರೈವರ್ ಬಾಬಣ್ಣ ಎಂದೇ ಕರೆಯಲ್ಪಡುತ್ತಿದ್ದರು. ವರ್ಷಗಳ ಹಿಂದೆ ಡ್ರೈವಿಂಗ್ ಶಾಲೆಗಳು ಅಪರೂಪವಾಗಿದ್ದ ಕಾಲದಲ್ಲಿ ಹಲವು ಮಂದಿಗೆ ಚಾಲಕ ವೃತ್ತಿಯನ್ನು ಕಲಿಸಿಕೊಟ್ಟ ವಿಕ್ಟರ್ ಡಿ’ಸೋಜಾ ಈ ಮೂಲಕ ಹಲವು ಯುವಕರಿಗೆ ಉದ್ಯೋಗ ಲಭಿಸಲು ಕಾರಣಕರ್ತರಾಗಿದ್ದರು. ಕೆಲವು ವರ್ಷಗಳ ಹಿಂದೆ ಶಾನುಮೋಳ್  ಎಂಬ ಲಾರಿ ಸರ್ವೀಸ್ ಉದ್ಯಮವನ್ನು ಆರಂಭಿಸಿದ ವಿಕ್ಟರ್ ಡಿ’ ಸೋಜಾ ಆ ಉದ್ಯಮವನ್ನು ಉತ್ತಮ ಮಟ್ಟಕ್ಕೆ ತಲುಪಿಸಿ ಪ್ರಸ್ತುತ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ಮೃತರು ಪತ್ನಿ ಲೂಸಿ ಕ್ರಾಸ್ತ, ಮಕ್ಕಳಾದ ಸುನಿತ, ವಿಜಯ, ಪ್ರಿಯ ಡಿ’ಸೋಜಾ, ಸಂತೋಷ್, ಮನೋಜ್ ಡಿ’ಸೋಜಾ, ಅಳಿಯಂದಿರಾದ ಫ್ರಾನ್ಸಿಸ್, ಬರ್ನಾಡ್, ರೊನಾಲ್ಡ್, ಸೊಸೆಯಂದಿರಾದ ಸೋನಿಯ, ಪ್ರಮಿಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬಿಜೆಪಿ ನೇತಾರ ಹರೀಶ್ ನಾರಂಪಾಡಿ, ಸಿಪಿಎಂ ನೇತಾರರಾದ ಗಿರೀಶ್, ಅಬ್ದುಲ್ ಲತೀಫ್ ಸಿ.ಕೆ, ಕಾಂಗ್ರೆಸ್ ನೇತಾರ ಜೋನಿ ಎ.ಪಿ ಸರ್ಕಲ್, ಕುಂಬ್ಡಾಜೆ ಪಂಚಾಯತ್ ಸದಸ್ಯೆ ಬಬಿತ ಮೊದಲಾದವರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page