ಕಾಸರಗೋಡು: ಯಕ್ಷಗಾನ ಕಲಾವಿದರಾಗಿದ್ದ ಪಾಯಿಚ್ಚಾಲ್ ನಿವಾಸಿ ಜಯ ಬಲ್ಯಾಯ (86) ನಿಧನ ಹೊಂದಿದರು. ಕೂಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿಯೂ, ಪ್ರಸಾದನ ಕಲಾವಿದನೂ ಆಗಿದ್ದರು. ತಾಳಮದ್ದಳೆ ಅರ್ಥದಾರಿಯೂ ಆಗಿ ಗುರುತಿಸಿಕೊಂಡಿದ್ದರು.ಕೂಡ್ಲು ಯುವಜನ ಸಂಘ ನಾಟಕ ತಂಡದಲ್ಲಿ ಕಲಾವಿದ, ಗಾಯಕ, ಕೃಷಿಕರೂ ಆಗಿದ್ದರು. ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಸಮಿತಿ ಸದಸ್ಯ, ಪಾಯಿಚ್ಚಾಲ್ ಶ್ರೀ ವಿಷ್ಣುಮಂಗಲ ಮಹಾವಿಷ್ಣು ಭಜನಾ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ ಸರೋಜಿನಿ, ಮಕ್ಕಳಾದ ರೂಪಕಲಾ, ರಾಧ, ಗೋಪಾಲಕೃಷ್ಣ, ಭಾರತಿ, ಸುರೇಂದ್ರ, ಶೈಲಜ, ನಮಿತ, ಅಳಿಯಂದಿರಾದ ಆನಂದ, ವಿಜಯ, ಗಂಗಾಧರ ಜೋಷಿ, ಅರವಿಂದನ್, ಸೊಸೆಯಂದಿರಾದ ಶೋಭ, ಸೌಮ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಸಂತೋ ಷ್ ಈ ಹಿಂದೆ ನಿಧನ ಹೊಂದಿದ್ದಾರೆ.






