ಕುಂಬಳೆ: ಮಂಗಲ್ಪಾಡಿ ಪ್ರತಾಪ ನಗರ ಎಂಬಲ್ಲಿ ನಡೆಸುತ್ತಿದ್ದ ಕೋಳಿ ಅಂಕ ಅಡ್ಡೆಗೆ ಕುಂಬಳೆ ಪೊಲೀಸರು ನಿನ್ನೆ ಸಂಜೆ ದಿಡೀರ್ ದಾಳಿ ನಡೆಸಿ, ಅಲ್ಲಿಂದ ೧೪ ಕೋಳಿಗಳು ಮತ್ತು 3110 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಕುಂಬಳೆ ಪೊಲೀಸ್ ಠಾಣೆ ಎಸ್ಐ ಅನೂಪ್ ಎಸ್.ರ ನೇತೃತ್ವದ ಪೊಲೀಸರ ತಂಡ ಈ ದಾಳಿ ನಡೆಸಿದೆ. ಇದಕ್ಕೆ ಸಂಬಂಧಿಸಿ ಉಪ್ಪಳ ಪ್ರತಾಪನಗರದ ದಿನೇಶ್ (26), ಮಂಗಲ್ಪಾಡಿ ಶಾಂತಿಗಿರಿಯ ಪುಳಿಕುತ್ತಿ ಹೌಸ್ನ ಮೋಹನನ್ (42), ಮಂಗಲ್ಪಾಡಿ ಶಾಂತಿಗುರಿ ನಿವಾಸಿಗಳಾದ ಉದಯ (42), ಕೌಶಿಕ್ ಕೆ. (32), ಮಂಗಲ್ಪಾಡಿ ಪ್ರತಾರನಗರ ಗಣೇಶ್ ಕೆ.ಎನ್(55) ಮತ್ತು ಪೈವಳಿಕೆ ಕಯ್ಯಾರಿನ ಪದ್ಮನಾಭ (50) ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಅವರಿಗೆ ನೋಟೀಸ್ ನೀಡಿದ್ದಾರೆ. ಈ ಕೇಂದ್ರದಲ್ಲಿ ಒಟ್ಟು 20 ಮಂದಿ ಕೋಳಿಯಂಕದಲ್ಲಿ ನಿರತರಾಗಿದ್ದರೆಂದೂ, ಬಾಕಿ ಉಳಿದವರು ಅಲ್ಲಿಂದ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






