ಕಾಸರಗೋಡು: ವಿದ್ಯಾನಗರದಲ್ಲಿ ರುವ ವಿದ್ಯುತ್ ಸಬ್ ಸ್ಟೇಶನ್ ಬಳಿ ಇರಿಸಲಾಗಿದ್ದ ವಿದ್ಯುತ್ ಕೇಬಲ್‌ಗಳಿಗೆ ಬೆಂಕಿ ತಗಲಿ ಸುಮಾರು 65 ಲಕ್ಷ ರೂ.ತನಕ ನಷ್ಟ ಉಂಟಾಗಿದೆ.
ನಿನ್ನೆ ಸಂಜೆ ಈ ಬೆಂಕಿ ಅನಾಹುತ ಸಂಭವಿಸಿದೆ. ಪ್ರಸ್ತುತ ಸಬ್ ಸ್ಟೇಶನ್ ಬಳಿಯ ರಸ್ತೆ ಬದಿ ರಾಶಿ ಹಾಕಿದ್ದ ಅಂಡರ್ ಗ್ರೌಂಡ್ ಕೇಬಲ್‌ಗಳು, 600 ಮೀಟರ್ ಪೀಸುಗಳು, ಜಿಲ್ಲೆಯ ವಿವಿಧೆಡೆಗಳಲ್ಲಾಗಿ ಕೆ-ಫೋನ್ ಸ್ಥಾಪಿಸಲೆಂದು ತಂದಿರಿಸಲಾಗಿದ್ದ ಒಪ್ಟಕ್ಕಲ್ ಫೈಬರ್‌ನ 97,000 ಮೀಟರ್ ನಷ್ಟು ಕೇಬಲ್‌ಗಳು ಬೆಂಕಿಗಾಹುತಿಯಾಗಿದೆ. ವಿದ್ಯುತ್ ಲೈನ್‌ನಲ್ಲಿ ಸ್ಪಾರ್ಕ್ ಉಂಟಾಗಿ ಅದು ಕಡಿದು ಅಲ್ಲೇ ಅಡಿಭಾಗದಲ್ಲಿ ಇರಿಸಿದ್ದ ಕೇಬಲ್‌ಗಳ ಮೇಲೆ ಬಿದ್ದಿರುವುದೇ ಬೆಂಕಿ ತಗಲಲು ಕಾರಣವೆಂದು ಹೇಳಲಾಗುತ್ತಿದೆ. ಬೆಂಕಿ ತಗಲಿರುವು ದನ್ನು ಕಂಡ ಪರಿಸರದವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದಲ್ಲಿ ಕಾಸರಗೋಡು ಅಗ್ನಿಶಾಮಕದಳದ ಸಿಬ್ಬಂದಿಗಳು ಎರಡು ಯೂನಿಟ್ ವಾಹನ ತಕ್ಷಣ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಸತತ ಎರಡು ತಾಸುಗಳ ತನಕ ನಡೆಸಿದ ತೀವ್ರ ಕಾರ್ಯಾಚರಣೆ ಯಿಂದ ಬೆಂಕಿ ನಂದಿಸಿದರು. ಜೆಸಿಬಿಯನ್ನೂ ಇದಕ್ಕಾಗಿ ಬಳಸಲಾಯಿತು.
ಕೇಬಲ್‌ಗಳು ಬೆಂಕಿಗಾಹುತಿ ಯಾಗಿರುವುದರಿಂದ ಮಾತ್ರವಾಗಿ ಸುಮಾರು ೫೫ ಲಕ್ಷ ರೂ.ಗಳ ನಷ್ಟ ಉಂಟಾಗಿದೆಯೆಂದು ಕೆ-ಫೋನ್ ವಿಭಾಗದ ಸೂಪರ್‌ವೈಸರ್ ರಾಧಾಕೃಷ್ಣನ್ ತಿಳಿಸಿದ್ದಾರೆ. ಈ ಬೆಂಕಿ ಅನಾಹುತದಿಂದ ವಿದ್ಯುನ್ಮಂಡಳಿಗೂ ಸುಮಾರು 10 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆಯೆಂದು ಅಸಿಸ್ಟೆಂಟ್ ಎಕ್ಸ್ಯಿಕ್ಯೂಟಿವ್ ಇಂಜಿನಿಯರ್ ಗಾಯತ್ರಿ ತಿಳಿಸಿದ್ದಾರೆ.
ಬೆಂಕಿ ನಂದಿಸಲು ನಡೆಸಲಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿಗಳಾದ ಎಂ. ಉಮೇಶನ್, ಒ.ಕೆ. ಪ್ರಜಿತ್, ವಿ.ಎಸ್. ಗೋಕುಲ್‌ಕೃಷ್ಣನ್, ಜಿಜೋ ಜೆಬಿ, ಎಂ. ಬಿಬೀಶ್, ಎನ್. ರಮೇಶ್, ಒ.ಕೆ. ಅನುಶ್ರೀ,ಅರುಣಾ ಪಿ ನಾಯರ್, ಹೋಂಗಾರ್ಡ್ ಗಳಾದ ವಿ. ರಾಜು, ಎಂ.ಕೆ. ಶೈಲೇಶ್, ಪಿ. ರಂಜಿತ್ ಮತ್ತು ಪಿ. ಶ್ರೀಜಿತ್ ಎಂಬಿವರು







