ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆ ದಶಮಾನೋತ್ಸವ: ಪುಸ್ತಕ, ಕಿಟ್ ವಿತರಣೆ

ಹೊಸಂಗಡಿ: ಜೈಶ್ರೀರಾಮ್ ಸಮಾಜ ಸೇವಾಸಂಸ್ಥೆ ಮಂಜೇಶ್ವರ ಇದರ ದಶಮಾನೋತ್ಸವ ಕಾರ್ಯಕ್ರಮ ಹೊಸಂಗಡಿ ಆದಿಕ್ಷೇತ್ರ ಶ್ರೀ ರಕ್ತೇಶ್ವರಿ ದೇವಸ್ಥಾನದ ಆದಿ ಕಲಾಮಂಟಪದಲ್ಲಿ ಜರಗಿತು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಉಳ್ಳಾಲ ಕಾಪಿಕ್ಕಾಡ್ ಮಂತ್ರದೇವತೆ ಕೊರಗಜ್ಜ ಸನ್ನಿಧಿಯ  ಧರ್ಮದರ್ಶಿ ಪ್ರಶಾಂತ್ ಗುರೂಜಿ ಕಾಪಿಕ್ಕಾಡ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಅಧ್ಯಕ್ಷ ನ್ಯಾಯವಾದಿ ಕೆ.ಜೆ. ನವೀನ್‌ರಾಜ್ ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ನೂರು ಕುಟುಂ ಬಗಳಿಗೆ ಕಿಟ್ ವಿತರಣೆ, ಪುಸ್ತಕ ವಿತರಣೆ, ಮೂರು ಯೋಜನೆಗಳ ಭರವಸೆ ಹಸ್ತಾಂ ತರ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಮಂಜೇಶ್ವರ ಸರಸ್ವತಿ ಟೀಚರ್ ಮೆಮೋರಿಯಲ್ ಚಾರಿಟೇಬಲ್ ಅಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು, ಜನಜಾಗೃತಿ ವೇದಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಅಧ್ಯಕ್ಷ ಡಾ. ಡಿ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಘು ಕಾರ್ನವರ್, ಶಿವ ಮಾನ್ಯ, ಹರೀಶ್ ಶೆಟ್ಟಿ ಮಾಡ, ಸೇವಾ ಸಂಸ್ಥೆಯ ಅಧ್ಯಕ್ಷ ಕೃಷ್ಣ ಅಟ್ಟೆಗೋಳಿ ಮಾತನಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಿತು.

RELATED NEWS

You cannot copy contents of this page