ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್‌ಗೆ ನಿಲುಗಡೆ: ಕೆ. ಸುರೇಂದ್ರನ್‌ರಿಗೆ ಅಭಿನಂದನೆ

ಮಂಜೇಶ್ವರ: ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ಮಂಜೇಶ್ವರದಲ್ಲಿ ನಿಲುಗಡೆ ನೀಡಲಾಗಿದ್ದು, ಇಂದು ಬೆಳಿಗ್ಗೆ ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರೀಶ್ಚಂದ್ರ ಮಂಜೇಶ್ವರ, ಪ್ರಶಾಂತ್ ಕುಮಾರ್, ರವಿ ಎಂ.ಕೆ. ಕೋಳ್ಯೂರು, ರಾಮಕೃಷ್ಣ ಭಟ್, ಜಗದೀಶ್, ಭಾಸ್ಕರ ಬಿ.ಎಂ. ಭಾಗವಹಿಸಿದರು.

ಕೇಂದ್ರ ರೈಲ್ವೇ ಸಚಿವರಲ್ಲಿ ಕೆ. ಸುರೇಂದ್ರನ್ ಮಾಡಿದ ವಿನಂತಿ ಹಿನ್ನೆಲೆಯಲ್ಲಿ ಮಂಜೇಶ್ವರದಲ್ಲಿ ಪರಶುರಾಂ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಲು ಗಡೆಗಾಗಿ ಯತ್ನಿಸಿದ ಕೆ. ಸುರೇಂದ್ರನ್ ರನ್ನು ಮಂಜೇಶ್ವರದ ಜನತೆ ಅಭಿನಂ ದಿಸಿದೆ. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜನಪರ ಹೋರಾಟ ಸಮಿತಿ ಮಂಜೇಶ್ವರ, ಎಬಿವಿಪಿ ಕೆ. ಸುರೇಂದ್ರನ್‌ರಿಗೆ ಕೃತಜ್ಞತೆ ಸಲ್ಲಿಸಿದೆ. ಮಂಜೇಶ್ವರದ ನಾಗರಿಕರ ಹಲವಾರು ವರ್ಷಗಳ ಬೇಡಿಕೆಯಾಗಿತ್ತು ಪರಶುರಾಂ ಎಕ್ಸ್‌ಪ್ರೆಸ್‌ಗೆ ನಿಲುಗಡೆ ಎಂಬುದು. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಅಭಿವೃದ್ಧಿ ಕ್ರಿಯಾ ಸಮಿತಿ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮನವಿ ನೀಡಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ರನ್ನು ಸಂಪರ್ಕಿಸಿ ಶೀಘ್ರವೇ ಮಂಜೇಶ್ವರದಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಕ್ರಿಯಾ ಸಮಿತಿ ಅಭಿನಂದನೆ ಸಲ್ಲಿಸಿದೆ.

You cannot copy contents of this page