ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್‌ರಿಂದ ಪರ್ಯಟನೆ ಆರಂಭ

ಉಪ್ಪಳ: ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದ ಕೆ.ಆರ್ ಜಯಾನಂದ, ಬಿಜೆಪಿಯ ಕೆ.ಸುರೇಂದ್ರನ್, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಸ್ಪರ್ಧಾಕಣದಲ್ಲಿದ್ದಾರೆ. ಈಗಾಗಲೇ ಎಡರಂಗ, ಬಿಜೆಪಿ ಪಕ್ಷಗಳ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿರುವಂತೆ ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್‌ರವರ ಪರ್ಯಟನೆ ಆರಂಭಗೊAಡಿತು. ಮಜೀರ್ಪಳ್ಳದಿಂದ ಆರಂಭಗೊAಡು ಸೀತಾಂಗೋಳಿ, ಪೆರ್ಲ ಮೊದಲಾದ ಕಡೆಗಳಲ್ಲಿ ಸಾಗಿ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ನೇತಾರರು, ಕಾರ್ಯಕರ್ತರು ಪಾಲ್ಗೊಂಡರು.

You cannot copy contents of this page