ಕಾಸರಗೋಡು: ರಂಜಾನ್ ಎಂಬ ತರಬೇತಿ ಕಳರಿಯಲ್ಲಿ ಗಳಿಸಿಕೊಂಡ ಆತ್ಮಸಂಸ್ಕಾರದ, ಸಹನೆಯ ಸಂದೇಶವನ್ನು ಪಾಲಿಸಿಕೊಂಡು ಜೀವನವನ್ನು ಕ್ರಮಪಡಿಸಲು ಎಲ್ಲರೂ ಸಿದ್ಧರಾಗಬೇಕೆಂದು, ಸಾಹೋದರ್ಯದ ಹಾಗೂ ಮಾನವಿಕತೆಯ ಮೌಲ್ಯಗಳನ್ನು ಜೀವನದ ಉದ್ದಕ್ಕೂ ಎತ್ತಿ ಹಿಡಿಯಬೇಕೆಂದು ಆಫಿದ್ ಕೆ.ಟಿ. ಸಿರಾಜ್ ಆಹ್ವಾನ ನೀಡಿದರು. ವಿಸ್ಡಂ ದ ಅಹ್ವ ಸೆಂಟರ್ ಆಯೋಜಿಸಿದ ಕಾಸರಗೋಡು ಟೌನ್ ಈದ್ಗಾಹ್ನಲ್ಲಿ ಈದುಲ್ ಫಿತೃ ಖುತ್ಬಾ ನಿರ್ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಈದ್ಗಾಹ್ಗಳನ್ನು ಆಯೋಜಿಸಲಾಯಿತು.
ಉಪ್ಪಳ ಪ್ಲೇಆಫ್ ಟರ್ಫ್ನಲ್ಲಿ ನಡೆದ ಈದ್ಗಾಹ್ಗೆ ಅಸ್ಬಕ್ ಅಲ್ ಹಿಕಮಿ ನೇತೃತ್ವ ನೀಡಿದರು. ಮೀಯಪದವಿನಲ್ಲಿ ತ್ವೈಬ್ ಮೌಲವಿ, ಅರಿಮಲೆಯಲ್ಲಿ ಹಾಫಿದ್ ಜುನೈದ್, ಕಡಂಬಾರ್ನಲ್ಲಿ ಶಮ್ಮಾಸ್ ಅಲ್ ಹಿಕಮಿ, ಪೈವಳಿಕೆಯಲ್ಲಿ ಅನ್ಸಾರ್ ಆರಿಕ್ಕಾಡಿ, ಬಂಬ್ರಾಣದಲ್ಲಿ ಹಸನ್ ಸಲಾಫಿ, ಆರಿಕ್ಕಾಡಿಯಲ್ಲಿ ಮುಹಾಜಿರ್ ಸ್ವಲಾಹಿ ನೇತೃತ್ವ ನೀಡಿದರು. ಕುಂಜತ್ತೂರು ನೂರ್ ಮಸ್ಜಿದ್ನಲ್ಲಿ ಶಮೀರ್ ಮೌಲವಿ ಖುತ್ಬಾ ನೆರವೇಗಿಸಿದರು. ಮೊಗ್ರಾಲ್ನಲ್ಲಿ ಶಿಹಾಬ್ ಮೊಗ್ರಾಲ್, ಚೌಕಿಯಲ್ಲಿ ಜಾಸಿರ್ ಅಲ್ ಹಿಕಮಿ, ಪಟ್ಲದಲ್ಲಿ ಅಷರ್ ಇಬ್ರಾಹಿಂ, ಎಸ್ಪಿ ನಗರದಲ್ಲಿ ಮುಜೀಬ್ ರಹ್ಮಾನ್ ಸ್ವಲಾಹಿ, ಕಲ್ಲಕಟ್ಟದಲ್ಲಿ ಅಶ್ರಫ್ ಮಾನ್ಯ, ಅಂಗಡಿಮುಗರುನಲ್ಲಿ ಇಬ್ರಾಹಿಂ ದಾರಿಮಿ, ಪೆರ್ಲದಲ್ಲಿ ಸವಾದ್ ಸಲಾಫಿ, ಮುಗು ರೋಡ್ನಲ್ಲಿ ಅನೀಸ್ ಮದನಿ, ನೀರ್ಚಾಲ್ನಲ್ಲಿ ಮುಕ್ತಾರ್ ಬಿನ್ ಅಬ್ದುಲ್ ಕಯ್ಯುಮ್, ಕೊಟ್ಯಾಡಿಯಲ್ಲಿ ಶಾಕಿರ್ ಸ್ವಲಾಹಿ, ಬೋವಿಕ್ಕಾನದಲ್ಲಿ ರಫೀಕ್ ಮೌಲವಿ ನೇತೃತ್ವ ನೀಡಿದರು.
ಕಾಸರಗೋಡು ಜಿಲ್ಲೆಯ ವಿವಿಧ ಮಸೀದಿಗಳಲ್ಲಿಯೂ ಈದ್ ನಮಾಜ್ ನಡೆಸಲಾಗಿದ್ದು, ಹಲವಾರು ಮಂದಿ ಭಾಗವಹಿಸಿದರು. ತಳಂಗರೆ ಮಾಲೀಕ್ ದಿನಾರ್ ವಲಿಯ ಜುಮಾ ಮಸೀದಿ, ಹಳೆ ಬಸ್ ನಿಲ್ದಾಣದ ಮುಬಾರಕ್ ಮಸೀದಿ, ನೆಲ್ಲಿಕುಂಜೆ ಮೊಹಿಯುದ್ದೀನ್ ಜುಮಾ ಮಸೀದಿ, ಆನೆಬಾಗಿಲು ಬದರ್ ಜುಮಾ ಮಸೀದಿ, ಹೊಸ ಬಸ್ ನಿಲ್ದಾಣದ ಸುನ್ನಿ ಸೆಂಟರ್, ಅನ್ಸಾರ್ ಮಸೀದಿ, ಕುಂಬಳೆ ಜುಮಾ ಮಸೀದಿ, ಚೆರ್ಕಳ ಜುಮಾ ಮಸೀದಿ, ಉದ್ಯಾವರ ಜುಮಾ ಮಸೀದಿ, ದಾರುಸ್ಸಲಾಂ ಸಾಫಿ ಮಸೀದಿ, ಕುಂಜತ್ತೂರು ಮಸ್ಜಿದುನ್ನೂರು, ಪೊಸೋಟು ಜುಮಾ ಮಸೀದಿಗಳಲ್ಲಿ ಈದ್ ನಮಾಜ್ ಏರ್ಪಡಿಸಲಾಗಿತ್ತು.






