ಪುತ್ತಿಗೆ: ನೂತನ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಗಂಟೆಗಳ ಮುಂಚೆ ಮನೆಯೊಡೆಯ ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಡೆದಿದೆ. ಮುಗು ಉರ್ಮಿ ಜುಮಾ ಮಸೀದಿ ಸಮೀಪದ ದಿ| ಕುಂಞಿಮಾಹಿನ್ ಕುಟ್ಟಿ-ಬೀಫಾತಿಮ ದಂಪತಿಯ ಪುತ್ರ ಮುಹಮ್ಮದ್ ಯಾನೆ ಮೋಣು (50) ಮೃತಪಟ್ಟ ವ್ಯಕ್ತಿ. ಇವರು ಎgಡು ವಾರಗಳ ಹಿಂದೆ ಗಲ್ಫ್‌ನಿಂದ ಮನೆಗೆ ಆಗಮಿಸಿದ್ದರು. ಮುಗುವಿನಲ್ಲಿ ನಿರ್ಮಿಸಿದ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಿನ್ನೆ ಬೆಳಿಗ್ಗೆ ನಡೆಸಲು ತೀರ್ಮಾನಿಸಲಾ ಗಿತ್ತು. ಈ ಹಿನ್ನೆಲೆಯಲ್ಲಿ ಸ್ವಂತ ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ನಿನ್ನೆ ಮುಂಜಾನೆ ೪ ಗಂಟೆಗೆ ಕಾರಿನಲ್ಲಿ ಇವರು ಬರುತ್ತಿದ್ದಾಗ ಹೃದಯಾ ಘಾತವುಂಟಾಗಿದೆ. ಕೂಡಲೇ ಕಾಸg ಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಶಂಸೀನಾ, ಮಕ್ಕಳಾದ ಮುಹಮ್ಮದ್ ರಾಸಿ, ಅಬ್ದುಲ್ ರಾಫಿಹ್, ಫಾತಿಮ, ಮುಹಮ್ಮದ್ ರಫಾನ್, ಮುಹ ಮ್ಮದ್ ರಹಾನ್, ಸಹೋದರ-ಸಹೋದರಿಯರಾದ ನಫೀಸ, ಹಬೀಬ, ಫೌಸಿಯ, ಸಲಾಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






