ಮಂಜೇಶ್ವರ: ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜೇಶ್ವರ ನ್ಯೂಮಜಲ್ ನಿವಾಸಿ ಉದ್ಯಾವರ ಮಾಡದಲ್ಲಿ ವ್ಯಾಪಾರಿಯಾಗಿರುವ ಮುಹಮ್ಮದ್ ಅಶ್ರಫ್ರ ಪುತ್ರ ಮುಹಮ್ಮದ್ ತಾಹ (22) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ರಾತ್ರಿ 9.45ರ ವೇಳೆ ಈತ ಮನೆಯೊಳಗೆ ಬೆಡ್ರೂಂನಲ್ಲಿ ಫ್ಯಾನ್ಗೆ ನೇಣು ಬಿಗಿದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ಈತನನ್ನು ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ನಿನ್ನೆ ಸಂಜೆ ತಂದೆ ಪೇಟೆಗೆ, ತಾಯಿ ಹಾಗೂ ಸಹೋದರಿಯರು ಉದ್ಯಾವರ ಮಾಡದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಹೊತ್ತಿನಲ್ಲಿ ಮುಹಮ್ಮದ್ ತಾಹ ಮಾತ್ರವೇ ಮನೆಯಲ್ಲಿದ್ದನ. ರಾತ್ರಿ 9.45ರ ವೇಳೆ ತಾಯಿ ಹಾಗೂ ಸಹೋದರಿಯರು ಮನೆಗೆ ಬಂದಾಗಲೇ ಮುಹಮ್ಮದ್ ತಾಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆನ್ನಲಾಗಿದೆ. ನೇಣು ಬಿಗಿಯಲು ಕಾರಣವೇನೆಂದು ತಿಳಿದುಬಂದಿಲ್ಲ.
ಪ್ಲಸ್ಟು ಶಿಕ್ಷಣ ಮುಗಿಸಿದ ಬಳಿಕ ಮುಹಮ್ಮದ್ ತಾಹ ಮನೆಯಲ್ಲಿದ್ದನ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. ಮೃತನು ತಂದೆ, ತಾಯಿ ತಾಹಿರ, ಸಹೋದರಿಯ ರಾದ ತಹಾನಿ, ತನ್ಸಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.






