ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಮೊನ್ನೆವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 28ಕ್ಕೇರಿದೆ.
ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಕೆ.ಆರ್. ಜಯಾನಂದ, ವಿಠಲ ರೈ ಎಂಬಿವರು 2 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಕೂಡಾ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಅಬ್ದುಲ್ಲ ಕೆ ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಮಂಜೇಶ್ವರ ಮಂಡಲದಲ್ಲಿ 8 ಮಂದಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.
ಕಾಞಂಗಾಡ್ ವಿಧಾನಸಭಾ ಮಂಡಲದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ಎಂ. ಬಲ್ರಾಜ್, ವೇಣುಗೋಪಾಲ ಕೆ, ಸಿಪಿಐ ಅಭ್ಯರ್ಥಿ ಗೋವಿಂದನ್ ಪಳ್ಳಿಕ್ಕಾಪಿಲ್, ಬಿಎಸ್ಪಿ ಅಭ್ಯರ್ಥಿ ವಿಜಯ ಕುಮಾರ್ ಬಿ ನಾಮಪತ್ರ ಸಲ್ಲಿಸಿದ್ದು, ಇಲ್ಲಿ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಉದುಮ ವಿಧಾನಸಭಾ ಮಂಡಲದಲ್ಲಿ ಸಿಪಿಎಂನ ಸಿ.ಎಚ್. ಕುಂಞಂಬು 3 ಸೆಟ್, ಬಾಲನ್ ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ. ಮನುಲಾಲ್, ಇಂಡ್ಯನ್ ನೇಶನಲ್ ಕಾಂಗ್ರೆಸ್ನ ನೀಲ ಕಂಠನ್ ಎಂಬಿವರು ನಾಮಪತ್ರ ಸಲ್ಲಿಸಿದ್ದು, ಮಂಡಲದಲ್ಲಿ 7 ನಾಮಪತ್ರವನ್ನು ಸಲ್ಲಿಸಿದಂತಾಗಿದೆ.
ತೃಕರಿಪುರ ಮಂಡಲದಲ್ಲಿ ಸಿಪಿಎಂನ ವಿ.ಪಿ.ಪಿ. ಮುಸ್ತಫ 3, ಸಾಬು ಎಬ್ರಹಾಂ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. 20-ಟ್ವೆಂಟಿ ಅಭ್ಯರ್ಥಿ ರವಿ ಕುಳಂಗರ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಶನಿವಾರ ಆರು ನಾಮಪತ್ರ ಸಲ್ಲಿಸಿದಂತಾಗಿದೆ.






