ಪೆರ್ಲ: ಶ್ರೀ ವಾಣಿಯ ಗಾಣಿಗ ಮಹಿಳಾ ಭಜನಾ ಮಂಡಳಿ ಮಂಗಳೂರು ಇದರ ೫ನೇ ವಾರ್ಷಿಕೋತ್ಸವ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜರಗಿತು. ಈ ವೇಳೆ ವಿಶೇಷ ಪೂಜೆ, ಭಜನಾ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಗುರುವಂದನೆ ನಡೆಯಿತು. ಇದೇ ವೇಳೆ ಭಜನಾ ತಂಡದ ಹಿರಿಯ ಸದಸ್ಯೆ ಅನಿತಾ ಟೀಚರ್‌ರನ್ನು ಸನ್ಮಾನಿಸಲಾಯಿತು. ಕಾಟುಕುಕ್ಕೆ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ ವನಿತಾ ಭಜನಾ ಮಂಡಳಿ ಸದಸ್ಯೆಯರಿಂದ ಭಜನೆ ಜರಗಿತು. ಮೃದಂಗದಲ್ಲಿ ತೇಜಸ್, ಹಾರ್ಮೋನಿಯಂನಲ್ಲಿ ಮನೋಜ್ ಸಹಕರಿಸಿದರು. ಅನಿತಾ, ಭುವನೇಶ್ವರಿ, ಜಯಲಕ್ಷ್ಮಿ, ಸುಮಿತ್ರ, ರಜನಿ, ವಾಣಿ, ಸುಶ್ಮ, ಅಮಿತ, ನವ್ಯ, ಅಶ್ವಿನಿ ಭಾಗವಹಿಸಿದರು.







