ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು ಬೆಳಿಗ್ಗೆ ಮಧೂರು ಪೂರ್ವವಲಯ, ಮಧೂರು ಪಶ್ಚಿಮವಲಯದಲ್ಲಿ ಗೃಹ ಸಂಪರ್ಕ ನಡೆಸಿ ಮತಯಾಚಿಸಿದರು. ಅಪರಾಹ್ನ ನಗರಸಭಾ ವೆಸ್ಟ್ ಏರಿಯಾ, ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ಗೃಹ ಸಂಪರ್ಕ ನಡೆಸುವರು.
ನಿನ್ನೆ ಬದಿಯಡ್ಕ ಪಂಚಾ ಯತ್ನ ವಿವಿಧ ಕಡೆಗಳಲ್ಲಿ ಮತ ಯಾಚನೆ ನಡೆಸಿದ್ದು, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ರನ್ನು ಭೇಟಿ ಯಾದರು. ಬಳಿಕ ಅಳಕ್ಕೆ ತರವಾಡು ಮನೆ, ನೀರ್ಚಾಲು ಪೇಟೆ, ಕುಮಾರಮಂಗಲ ಪರಿಸರದಲ್ಲಿ ಮತ ಯಾಚಿಸಿದರು. ಇವರ ಜೊತೆ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಪಂಚಾ ಯತ್ ಅಧ್ಯಕ್ಷ ಶಂಕರ ಡಿ, ಮಹೇಶ್ ವಳಕ್ಕುಂಜ, ಸುಕುಮಾರ ಕುದ್ರೆಪ್ಪಾಡಿ, ಅಶ್ವಿನಿ ಕೆ.ಎಂ, ನವಿನಾಕ್ಷನ್, ಶ್ಯಾಂ ಪ್ರಸಾದ್ ಸರಳಿ, ಹರೀಶ ಎ, ಪ್ರಶಾಂತ್ ಕುಮಾರ್ ಶೆಟ್ಟಿ ಬೇಳ ವಿವಿಧೆಡೆಗಳಲ್ಲಿ ಜತೆಗಿದ್ದರು.






