ಹೃದಯಾಘಾತದಿಂದ ಯುವಕ ನಿಧನ

ಕುಂಬಳೆ: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದರು. ಪೊನ್ನೆಂಗಳ ಮುಗು ರೋಡ್ ನಿವಾಸಿ ದಿ| ನಾರಾಯಣ ಎಂಬವರ ಪುತ್ರ ಕುಮಾರನ್ (40) ಮೃತಪಟ್ಟ ವ್ಯಕ್ತಿ. ಇವರು ಟೈಲ್ಸ್ ಕಾರ್ಮಿಕನಾಗಿದ್ದರು. ಇಂದು ಮುಂಜಾನೆ 3.30ರ ವೇಳೆ ಇವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಮನೆಯವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಆದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಜಾನಕಿ, ಸಹೋದರ ವಿಜಯ, ಸಹೋದರಿ ರತ್ನಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page