ತ್ಯಾಜ್ಯ ತುಂಬಿ ತುಳುಕುತ್ತಿರುವ ಮಂಜೇಶ್ವರ ಸಮುದ್ರ ತೀರ: ತೆರವಿಗೆ ಕ್ರಮವಿಲ್ಲ

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಸಾರ್ವಜನಿ ಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ತಂಪು ಪಾನೀಯ ಸಹಿತ ವಿವಿಧ ಬಾಟಲಿಗಳನ್ನು ಹಾಕಲು ಪೆಟ್ಟಿಗೆಯನ್ನು ಇರಿಸಲಾಗಿದ್ದು, ಆದರೆ ಅದರಲ್ಲಿ ಇತರ ತ್ಯಾಜ್ಯಗಳನ್ನು ಹಾಕಿ ಪರಿಸರ ಶೋಚನೀಯಾವಸ್ಥೆಗೊಂಡಿರುವುದಾಗಿ ದೂರಲಾಗಿದೆ. ಇದರಿಂದ ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಊರವರು ಈ ತ್ಯಾಜ್ಯದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೀದಿ ನಾಯಿಗಳು ಮುತ್ತಿಗೆ ಹಾಕುತ್ತಿರುವುದು ಮಕ್ಕಳು ಸಹಿತ ಸಾರ್ವಜನಿಕರಿಗೆ ಆತಂಕÀ ಸೃಷ್ಟಿಸಿದೆ. ಈ ಪೆಟ್ಟಿಗೆಯಲ್ಲಿ ಬಾಟಲಿಯನ್ನು ಮಾತ್ರವೇ ಹಾಕಬೇಕಾಗಿದ್ದು, ಆದರೆ ಇದರಲ್ಲಿ ಇತರ ತ್ಯಾಜ್ಯವನ್ನು ಹಾಕಿ ಪರಿಸರವನ್ನು ಹಾಳು ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆAದು, ತ್ಯಾಜ್ಯ ತೆರವುಗೊಳಿಸಿ ಶುಚೀಕರಣಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page