ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವು

ಕುಂಬಳೆ: ನಾಯ್ಕಾಪಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ದೂರಲಾಗಿದೆ.  ಲಾರಿ ಚಾಲಕ ವಡಗರದ  ಶಾಲು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಎರಡು ದಿನಗಳ ಹಿಂದೆ ಪೆರ್ಲ, ಸೀತಾಂಗೋಳಿ ಭಾಗಕ್ಕೆ ಲಾರಿಯಲ್ಲಿ ಸಾಮಗ್ರಿಗಳನ್ನು ತಂದು ವಿತರಿಸಲಾಗಿತ್ತು. ಬಳಿಕ ಕುಂಬಳೆಯಿಂದ ನಿನ್ನೆ ಸಂಜೆ ವಡಗರಕ್ಕೆ ಸರಕು ಸಾಗಿಸಲಿದ್ದ ಕಾರಣ ಲಾರಿಯನ್ನು ಮೊನ್ನೆ ನಾಯ್ಕಾಪಿನಲ್ಲಿ ನಿಲ್ಲಿಸಿ ಚಾಲಕ ಶಾಲು ಊರಿಗೆ ತೆರಳಿದ್ದರೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಅವರು ಮರಳಿ ಬಂದು ನೋಡಿದಾಗ ಲಾರಿಯ ಬ್ಯಾಟರಿಗಳು ಕಳವಿಗೀ ಡಾದ ಬಗ್ಗೆ ಅರಿವಿಗೆ ಬಂದಿರುವುದಾಗಿ ತಿಳಿಸಲಾಗಿದೆ.

You cannot copy contents of this page