ಕಾಸರಗೋಡು: ನಗರದ ನುಳ್ಳಿ ಪ್ಪಾಡಿಯ ಬಹು ಅಂತಸ್ತು ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲೆಂದು ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಕರ್ನಾ ಟಕದ ವಲಸೆ ಕಾರ್ಮಿಕ ಕೊಲೆಗೈಯ್ಯ ಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಓರ್ವನನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆತನನ್ನು ಪೊಲೀಸ್ ತೀವ್ರ ವಿಚಾರಣೆಗೊಳಪಡಿ ಸುತ್ತಿದ್ದಾರೆ. ಪೊಲೀಸರ ಕಸ್ಟಡಿಗೊಳಗಾದ ವ್ಯಕ್ತಿ ಕರ್ನಾಟಕ ನಿವಾಸಿಯಾಗಿರುವು ದಾಗಿ ಹೇಳಲಾಗುತ್ತಿದ್ದರೂ, ಆತನ ಕುರಿತಾದ ಯಾವುದೇ ಮಾಹಿತಿಗಳನ್ನು ಪೊಲೀಸರು ಈ ತನಕ ಬಹಿರಂಗಪಡಿಸಿಲ್ಲ.
ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ ಚಂದ್ರಶೇಖರ್ ಸುರೇಶ್ ಪಟ್ಟಾಡ್ (38) ಕೊಲೆಗೈಯ್ಯಲ್ಪಟ್ಟ ಯುವಕ. ಮೃತದೇಹ ಪತ್ತೆಯಾದ ಸ್ಥಳದ ಮಾಲಕ ನೀಡಿದ ದೂರಿನಂತೆ ಪೊಲೀಸರು ಮೊದಲು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆಯಾಗಿರು ವುದಾಗಿ ಸ್ಪಷ್ಟಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಕೊಲೆ ಪ್ರಕರಣವಾಗಿ ಬಳಿಕ ಪೊಲೀಸರು ಬದಲಾಯಿಸಿಕೊಂಡಿದ್ದರು. ಕೊಲೆ ನಡೆದ ಸ್ಥಳದಲ್ಲಿ ಕರ್ನಾಟಕದ ಇನ್ನೋರ್ವ ವಲಸೆ ಕಾರ್ಮಿಕನೋ ರ್ವನ ಆಧಾರ್ ಕಾರ್ಡ್ ಪತ್ತೆಯಾ ಗಿತ್ತು. ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳ ಪಡಿಸಿದರೂ, ಆತ ಈ ಘಟನೆಯಲ್ಲಿ ಶಾಮೀಲಾಗಿಲ್ಲವೆಂಬುವುದನ್ನು ಮನಗಂಡ ಪೊಲೀಸರು ಬಳಿಕ ಆತನನ್ನು ಬಿಡುಗಡೆಗೊಳಿಸಿದ್ದರು. ಕೊಲೆ ಆರೋ ಪಿಗಳ ಪತ್ತೆಗಾಗಿ ಪೊಲೀಸರು ನಂತರ ಕರ್ನಾಟಕ ಕೇಂದ್ರೀಕರಿಸಿ ತೀವ್ರ ಶೋಧ ಆರಂಭಿಸಿರುವಂತೆಯೇ, ಅಲ್ಲಿಂದ ಲಭಿಸಿದ ಸುಳಿವಿನಂತೆ ಓರ್ವ ಶಂಕಿತ ನನ್ನು ಸೆರೆ ಹಿಡಿದು ಕಾಸರಗೋಡು ಪೊಲೀಸ್ ಠಾಣೆಗೆ ತಂದು ಆತನನ್ನು ಈಗ ತೀವ್ರ ವಿಚಾರಣೆಗೊಳಪಡಿಸುತ್ತಿ ದ್ದಾರೆ. ಚಂದ್ರಶೇಖರ್ ಸುರೇಶ್ ಪಟ್ಟಾಡ್ನ ತಲೆಗೆ ಹೊಡೆದು ಕೊಲೆಗೈದು ಮೃತದೇಹವನ್ನು ಎಳೆದೊಯ್ದು ಬಹು ಅಂತಸ್ತಿನ ಕಟ್ಟಡದ ಲಿಫ್ಟ್ಗಾಗಿ ತೋಡಲಾಗಿದ್ದ ನೀರು ತುಂಬಿದ ಹೊಂಡದಲ್ಲಿ ಹಾಕಿದ್ದರೆಂಬು ವುದು ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಕೊಲೆ ನಡೆದ ಕಟ್ಟಡ ವನ್ನು ರಾತ್ರಿ ವೇಳೆ ಮದ್ಯಪಾನಿಗಳು ಮತ್ತು ಮಾದಕದ್ರವ್ಯ ವ್ಯಸನಿಗಳು ತಮ್ಮ ವಿಹಾರ ಕೇಂದ್ರಗಳನ್ನಾಗಿಸಿದ್ದರು. ಮಾತ್ರವಲ್ಲ ರಾತ್ರಿ ಅಲ್ಲಿ ವಲಸೆ ಕಾರ್ಮಿಕರು ಆಗಮಿಸಿ ನಿದ್ರಿಸುತ್ತಿದ್ದರು. ಆ ವೇಳೆ ಅಲ್ಲಿ ಉಂಟಾದ ಜಗಳದಲ್ಲಿ ಚಂದ್ರಶೇಖರ್ ಸುರೇಶ್ ಕೊಲೆಗೈಯ್ಯಲ್ಪಟ್ಟಿದ್ದರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.





