ಕುಂಬಳೆ: ಸೀತಾಂಗೋಳಿಯಲ್ಲಿ ಹಾಡಹಗಲೇ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಕುಂಬಳೆ ನಾಯ್ಕಾಪು ಕೋಟೆಕಾರ್‌ನ ಶ್ರೀನಿವಾಸ (39) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೆರೆ ಹಿಡಿದಿದ್ದಾರೆ.
ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಸೀತಾಂಗೋಳಿಯ ಬಿವರೇಜಸ್ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ ಶಫಾಯತ್‌ರ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಬಳಿಕ ನಡೆಸಿದ ಪರಿಶೀಲನೆಯಲ್ಲಿ ಶಫಾಯತ್‌ರ ತಲೆಗೆ ಹೊಡೆದು ಕೊಲೆಗೈದಿರುವುದಾಗಿ ತಿಳಿದು ಬಂದಿತ್ತು. ತಲೆಗೆ ಹೊಡೆಯಲು ಉಪಯೋಗಿಸಿದ ಮರದ ತುಂಡು ಸಮೀಪದಲ್ಲಿ ಪತ್ತೆಯಾಗಿತ್ತು. ಇದರಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಶ್ರೀನಿವಾಸನನ್ನು ಬಂಧಿಸಿದ್ದಾರೆ.
ಮದ್ಯದಮಲಿನಲ್ಲಿ ಉಂಟಾದ ವಾಗ್ವಾದವೇ ಕೊಲೆ ಕೃತ್ಯಕ್ಕೆ ಕಾರಣವಾಗಿದೆ ಎಂದು ಸೆರೆಗೀಡಾದ ಶ್ರೀನಿವಾಸ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಶಫಾಯತ್ ಹಾಗೂ ಶ್ರೀನಿವಾಸರ ಮಧ್ಯೆ ವಾಗ್ವಾದ ಉಂಟಾಗಿತ್ತೆಂದು ಹೇಳಲಾಗುತ್ತಿದೆ.
ಇದರ ಮುಂದು ವರಿಕೆಯಾಗಿ ಈ ಕೊಲೆ ಕೃತ್ಯ ನಡೆದಿದೆ ಎಂಬ ಅಂದಾಜಿನ ಮೇರೆಗೆ ಪೊಲೀಸರು ಶ್ರೀನಿವಾಸನನ್ನು ಕಸ್ಟಡಿಗೆ ತೆರೆಗುದುಕೊಂಡಿದ್ದರು. ತನಿಖೆ ವೇಳೆ ಈತ ತಪ್ಪೊಪ್ಪಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಿಂದ ಆರೋಪಿ ಯನ್ನು ಬಂಧಿಸಿರು ವುದಾಗಿಯೂ, ಈ ಕೊಲೆ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿ ದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಫಾಯತ್‌ರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಇಬ್ರಾಹಿಂ- ದಿ| ಖದೀಜ ದಂಪತಿಯ ಪುತ್ರನಾದ ಮೃತರು ಪತ್ನಿ ತಬ್ಸೀರ, ಮಕ್ಕಳಾದ ಸಿನಾನ್, ತಮೀಸ್, ಶಾಸಿಮ್, ದುವ ಮೆಹಕ್, ಸಹೋದರ ಸಹೋದರಿಯರಾದ ಮುಸ್ತಫ, ಕಲಂದರ್, ಲತೀಫ್, ಸಹದ್, ಸಲಾಮ್, ಉಬೈದುಲ್ಲ, ತಾಹಿರ, ಫೌಸಿಯ, ಸಮೀರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






