ಬದಿಯಡ್ಕ: 10ರ ಹರೆಯದ ಬಾಲಕಿಗೆ ಫಿನಾಯಿಲ್ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಹತ್ಯಾಯತ್ನ ಹಾಗೂ ಪೋಕ್ಸೋ ಪ್ರಕಾರ ದಾಖಲಿಸಿಕೊಂಡ ಪ್ರಕರಣದಲ್ಲಿ ೨೮ರ ಹರೆಯದ ಯುವಕನನ್ನು ಬಂಧಿಸಲಾಗಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ವಾಸಿಸುತ್ತಿದ್ದಾನೆ. ಈತ ಬಾಲಕಿಯ ತಂದೆಯ ಸ್ನೇಹಿತನಾಗಿದ್ದಾನೆಂದು ಹೇಳಲಾಗುತ್ತಿದೆ. ಇದರಿಂದ ಬಾಲಕಿಯ ಮನೆಗೆ ಯುವಕ ನಿರಂತರ ಬರುತ್ತಿದ್ದನೆನ್ನಲಾಗಿದೆ. ಈ ವೇಳೆ ಯುವಕನ ಕೆಟ್ಟ ರೀತಿಯಲ್ಲಿ ವರ್ತಿಸಿದ್ದು, ಅದನ್ನು ಬಾಲಕಿಯ ತಂದೆ ಪ್ರಶ್ನಿಸಿದ್ದರೆಂದು ಹೇಳಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಕಿಗೆ ಫಿನಾಯಿಲ್ ಕುಡಿಸಿದ ಯುವಕ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕಿಯ ಹೊಟ್ಟೆಗೆ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಫಿನಾಯಿಲ್ ಸೇರಿದೆ. ಇದರಿಂದ ಜೀವಾಪಾಯ ಉಂಟಾಗಿಲ್ಲ. ಆದರೆ ಯುವಕ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಯುವಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಆರೋಪಿಯನ್ನು ತಕ್ಷಣ ಬದಿಯಡ್ಕ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅನೂಪ್‌ಕೃಷ್ಣ ಬಂಧಿಸಿದ್ದಾರೆ.






