ವಸತಿಗೃಹದಲ್ಲಿ ಯುವತಿ, ಗೆಳೆಯನನ್ನು ನಗ್ನರನ್ನಾಗಿ ಮಾಡಿ ಫೊಟೋ ತೆಗೆದು ಬೆದರಿಕೆ: ಸೂತ್ರಧಾರ ಕುಂಜತ್ತೂರು ನಿವಾಸಿ ಸೆರೆ

ಹೊಸಂಗಡಿ: ಯುವತಿ ಹಾಗೂ  ಗೆಳೆಯನನ್ನು ವಸತಿಗೃಹದಲ್ಲಿ ನಗ್ನರನ್ನಾಗಿ ಮಾಡಿದ ಬಳಿಕ ಫೊಟೋ ತೆಗೆದು 2 ಲಕ್ಷ ರೂ. ಅಪಹರಿಸಲು ಯತ್ನಿಸಿದ ಪ್ರಕರಣದ ಸೂತ್ರಧಾರ ಸೆರೆಯಾಗಿದ್ದಾನೆ. ಕುಂಜತ್ತೂರಿನ ಪಿ.ಎಂ. ಅಬೂಬಕ್ಕರ್ (40)ನನ್ನು ಮಂಗಳೂರಿನಿಂದ ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಕರಣದ 5ನೇ ಆರೋಪಿಯಾಗಿದ್ದಾನೆ ಈತನೆಂದು ಪೊಲೀಸರು ತಿಳಿಸಿದ್ದಾರೆ.

2026 ಜನವರಿ 14ರಂದು ಮಧ್ಯಾಹ್ನ 12 ಗಂಟೆಗೆ ಹೊಸಂಗಡಿ ಪೇಟೆಯ ವಸತಿಗೃಹವೊಂದರಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಯುವತಿ ಹಾಗೂ ಗೆಳೆಯ ವಸತಿಗೃಹದ 206ನೇ ನಂಬ್ರ ಕೊಠಡಿಯಲ್ಲಿದ್ದರು. ಈ ಸಮಯದಲ್ಲಿ ಕೊಠಡಿಗೆ ತಲುಪಿದ ಐದು ಮಂದಿಯ ತಂಡ ಯುವತಿ ಹಾಗೂ ಗೆಳೆಯನನ್ನು ಬೆದರಿಸಿ ಇಬ್ಬರನ್ನೂ ನಗ್ನರನ್ನಾಗಿ ಮಾಡಿ ಒಟ್ಟಿಗೆ ನಿಲ್ಲಿಸಿ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಫೊಟೋ ಹಾಗೂ ವೀಡಿಯೋ ದಾಖಲಿಸಿರುವುದಾಗಿ ದೂರಲಾಗಿದೆ.

ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಪಡಿಸುವುದಾಗಿ ಬೆದರಿಸಿ 5೦೦೦ ರೂ., ಮೊಬೈಲ್ ಫೋನ್ ಅಪಹರಿ ಸಿದ್ದು, 2 ಲಕ್ಷ ರೂ. ಬೇಡಿಕೆ ಒಡ್ಡಿರು ವುದಾಗಿ ಯೂ ಹೇಳಲಾಗಿದೆ. ಇತರ ಆರೋ ಪಿಗಳನ್ನು ಈ ಮೊದಲೇ ಬಂಧಿ ಸಲಾಗಿತ್ತು. ತಲೆಮರೆಸಿಕೊಂಡಿದ್ದ ಅಬೂಬಕ್ಕರ್‌ನನ್ನು ಮಂಗಳೂ ರಿನಿಂದ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಜಿಜೀಶ್‌ರ ನೇತೃತ್ವದಲ್ಲಿ ಎಸ್‌ಐ ವೈಷ್ಣವ್, ಎಎಸ್‌ಐ ಫಿಲಿಪ್ ಥೋಮಸ್, ಸಂದೀಪ್ ಎಂಬಿವರು ಸೇರಿ ಬಂಧಿಸಿದ್ದಾರೆ.

RELATED NEWS

You cannot copy contents of this page