ಸಿಡಿಲು ಬಡಿದು ಮನೆಗೆ ಬೆಂಕಿ: ಮನೆಯೊಡತಿ ಅದೃಷ್ಟವಶಾತ್ ಅಪಾಯದಿಂದ ಪಾರು

ಕಾಸರಗೋಡು: ಸಿಡಿಲು ಬಡಿದ ಪರಿಣಾಮ ಮನೆಗೆ ಬೆಂಕಿ ತಗಲಿದ ಘಟನೆ ನಗರದ ಕಸಬಾ ಕಡಪ್ಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಸಬಾ ಕಡಪ್ಪುರದ ಮೀನಾಕ್ಷಿ ಎಂಬವರ ಮಾಲಕತ್ವದಲ್ಲ್ಲಿರುವ ಹೆಂಚು ಹಾಸಿದ ಮನೆಗೆ ಸಿಡಿಲು ಬಡಿದಿದೆ.  ಮನೆಯೊಳಗಿನ ಫ್ರಿಡ್ ನಿಂದ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅನಂತರ ಟಿವಿ, ಫ್ಯಾನ್, ಹಾಸಿಗೆ ಬಟ್ಟೆಬರೆಗಳಿಗೂ ಬೆಂಕಿ ಹರಡಿದೆ.  ಈ ವೇಳೆ ಮನೆ ಮಾಲಕಿ ಹೊರಕ್ಕೆ ಓಡಿದುದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿ ದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿ ಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸನ್ನಿ ಇಮಾನ್ವಲ್ ನೇತೃತ್ವದ ಕಾಸರ ಗೋಡು ಅಗ್ನಿಶಾಮಕದಳ ತಕ್ಷಣ ತಲುಪಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.  ರಕ್ಷಣಾ ಕಾರ್ಯಾಚರಣೆಯಲ್ಲಿ ಊರವರೂ ಸಹಕರಿಸಿದ್ದಾರೆ. ಘಟನೆಯಿಂದ  ಸುಮಾರು ಎರಡೂ ವರೆ ಲಕ್ಷ ರೂಪಾಯಿಗಿಂತಲೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ.

RELATED NEWS

You cannot copy contents of this page