‘ಮಿನ್ನಲ್ ಮ್ಯಾಜಿಕ್’ ಬ್ರಾಂಡ್‌ನ ಮದ್ಯ ಈ ತಿಂಗಳ ಕೊನೆಗೆ: ಅರ್ಧ ಲೀಟರ್‌ಗೆ 400 ರೂ.

ತಿರುವನಂತಪುರ: ರಾಜ್ಯ ಸರಕಾರದ ಹೊಸ ಮದ್ಯ ಬ್ರಾಂಡ್ ಮಿನ್ನಲ್ ಮ್ಯಾಜಿಕ್  ಈ ತಿಂಗಳ ಕೊನೆಗೆ ಮಾರುಕಟ್ಟೆಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ  ಜವಾನ್ ರಂ ಮಾರುಕಟ್ಟೆಯಲ್ಲಿದೆ. ಅದರ ಹೊರತಾಗಿ ಹೊಸ ಬ್ರಾಂಡ್ ಮಾರುಕಟ್ಟೆಗೆ ತಲುಪಲಿದೆ. ರಾಜ್ಯ ಸರಕಾರದ ಮಾಲಕತ್ವದಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಮಲಬಾರ್ ಡಿಸ್ಟಿಲರೀಸ್ ಈ ಮದ ಉತ್ಪಾದಿಸಲಿದೆ.  ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿರುವ ಸರಕಾರ ಹೊಸ ಬ್ರಾಂಡ್ ಮದ್ಯ ಮಾರುಕಟ್ಟೆಗೆ ಇಳಿಸಲು ತೀರ್ಮಾನಿಸಿತ್ತು. ಬಿವರೇಜಸ್ ಕಾರ್ಪರೇಶನ್ ಔಟ್‌ಲೆಟ್‌ಗಳ ಮೂಲಕ ಅರ್ಧ ಲೀಟರ್‌ನ ಬಾಟ್ಲಿಯನ್ನು ವಿತರಣೆಗಾಗಿ ತಲುಪಿಸಲಾಗುವುದು. 4೦೦ ರೂ. ಆಗಿದೆ ಇದರ ಬೆಲೆ. 9೦೦೦ ಪೆಟ್ಟಿಗೆ ಮದ್ಯವನ್ನು ಪ್ರತೀ ದಿನ ಉತ್ಪಾದಿಸಲಾಗುವುದು. ಬಳಿಕ ಅದನ್ನು 13,೦೦೦ ಪೆಟ್ಟಿಗೆಗೆ ಏರಿಸಲು ತೀರ್ಮಾನಿಸಲಾಗಿದೆ. ಚಿಟ್ಟೂರು ಮೇನೋನ್‌ಪಾರದಲ್ಲಿ ಮಲಬಾರ್ ಡಿಸ್ಟಿಲರೀಸ್ ವಿದೇಶ ಮದ್ಯ ಪ್ಲಾಂಟ್‌ನ್ನು ಫೆಬ್ರವರಿ ೨೧ರಂದು ಉದ್ಘಾಟಿಸಲಾಗಿತ್ತು. ಶಿಲಾನ್ಯಾಸಗೈದು ನಾಲ್ಕೂವರೆ ತಿಂಗಳಲ್ಲಿ ಪ್ಲಾಂಟ್ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ನಿಮಿಷಕ್ಕೆ 24೦ ಬಾಟ್ಲಿಗಳಲ್ಲಿ ಮದ್ಯ ತುಂಬಿಸಲು ಸಾಮರ್ಥ್ಯವಿರುವ ಪ್ಲಾಂಟ್ ಆಗಿದೆ ಇದು. ಮದ್ಯ ಉತ್ಪಾದನೆಗೆ ಪ್ರತೀ ದಿನ 1 ಲಕ್ಷ ಲೀಟರ್ ನೀರು ಅಗತ್ಯವಿದೆ. ಪ್ರಸ್ತುತ ಜಲ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಮಲಂಬುಳದ ಪ್ಲಾಂಟ್‌ನಿಂದ ನೀರು ತಲುಪಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಮಳೆನೀರು ಸಂಗ್ರಹ ನಿರ್ಮಿಸಲು ಯೋಜನೆ ಇದೆ.

RELATED NEWS

You cannot copy contents of this page