ಕುಂಬಳೆ: ಹನ್ನೆರಡು ವರ್ಷಗಳ ಹಿಂದೆ ಕೆಡವಲಾದ ಕುಂಬಳೆ ಬಸ್ ನಿಲ್ದಾಣದ ಬದಲಿಯಾಗಿ ನೂತನ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮತ್ತೆ ಕಾಲ ಕೂಡಿ ಬಂದಿದೆ. ನಿರ್ಮಾಣಕ್ಕೆ ಚಾಲನೆ ನೀಡುವ ಅಂಗವಾಗಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲ್ಕಂತಸ್ತಿನ ಕಟ್ಟಡ ನಿರ್ಮಿ ಸಲಿರುವ ಯೋಜನೆ ಸಿದ್ಧಪಡಿಸ ಲಾಗಿದೆ. ಗ್ರೌಂಡ್ ಫ್ಲೋರ್ನಲ್ಲಿ ವಾಹನ ಪಾರ್ಕಿಂಗ್, ಸ್ಯಾನಿಟರಿ ಸೌಕರ್ಯ ಏರ್ಪಡಿಸಲಾಗು ವುದು. ಒಂದು ಹಾಗೂ ಎgಡನೇ ಮಹಡಿಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳಾಗಿರುವುದು. ನಾಲ್ಕನೇ ಮಹಡಿ ಯಲ್ಲಿ ೫೦೦ ಮಂದಿಗೆ ಕುಳಿತು ಕೊಳ್ಳಬಹುದಾದ ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿದೆ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ. ಖಾಲಿದ್ ಎಂಬಿವರು ಇಂಜಿನಿಯರ್ ಜತೆಗಿದ್ದರು.






