ಉಳಿಯತ್ತಡ್ಕದಲ್ಲಿ ಯುವಕರ ಮಧ್ಯೆ ಘರ್ಷಣೆ: ಓರ್ವನಿಗೆ ಇರಿತ

ಕಾಸರಗೋಡು: ಮಧೂರು ಸಮೀಪದ ಉಳಿಯತ್ತಡ್ಕ ಆಜಾದ್‌ನಗರ ರಸ್ತೆ ಬಳಿ ನಿನ್ನೆ  ರಾತ್ರಿ ಯುವಕರ ಮಧ್ಯೆ  ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ಇರಿತ ಕ್ಕೊಳಗಾಗಿದ್ದಾನೆ. ಆತನನ್ನು  ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಆಜಾದ್‌ನಗರದ ಇರ್ಫಾನ್ ಇರಿತಕ್ಕೊಳಗಾಗಿದ್ದ ಯುವಕ. ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ಈ ಘರ್ಷಣೆ ನಡೆದಿದೆ. ಇದರಲ್ಲಿ ಅಖಿಲ್ ಎಂಬಾತ ಗಾಯಗೊಂಡಿ ದ್ದನು. ಆತ ಚಿಕಿತ್ಸೆಗಾಗಿ ನಿನ್ನೆ ಆಸ್ಪತ್ರೆಗೆ ಬಂದಿದ್ದು ಚಿಕಿತ್ಸೆ ಪಡೆಯುವ ವೇಳೆ ಅಲ್ಲಿಗೆ ಪೊಲೀಸರು ಆಗಮಿಸಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿರು ವುದಾಗಿ  ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇರಿತಕ್ಕೊಳಗಾದ ಇರ್ಫಾನ್‌ನ ಹೇಳಿಕೆಯನ್ನು ಕಾಸರಗೋಡು ಪೊಲೀಸರು ದಾಖಲಿಸಿಕೊಂಡಿದ್ದು, ಅದರಂತೆ ಅದರ ಆಧಾರದಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

You cannot copy contents of this page