ಪತ್ರಕರ್ತರ ಬಹುಮುಖ ಪ್ರಯತ್ನಗಳು ಶ್ಲಾಘನೀಯ-ಸೋಮಣ್ಣ ಬೇವಿನಮರದ

ಕುಂಬಳೆ: ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಕಾಲಕಾಲಕ್ಕೆ ಅಗತ್ಯದ ಅನುದಾನಗಳನ್ನು ರಾಜ್ಯದೊಳಗಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ನೀಡಿ ಬೆಂಬಲಿಸುತ್ತಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಕುಡಾಲುಮೇ ರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ, ದತ್ತಿನಿಧಿ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಪ್ರಮುಖ ಅಂಗವಾಗಿದ್ದು, ಜನರು ಮತ್ತು ಸಾಮಾಜಿಕ ವ್ಯವಸ್ಥೆ ಯನ್ನು ಜೋಡಿಸುವ ಕೈಂಕರ್ಯದಲ್ಲಿ ನಿರತರಾಗಿರುವ ಪತ್ರಕರ್ತರ ಬಹು ಮುಖದ ಪ್ರಯತ್ನಗಳು ಗಡಿನಾಡು ಕಾಸರಗೋಡಲ್ಲಿ ಶ್ಲಾಘನೀಯವಾ ದುದು. ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣ ಸಹಿತ ವಿವಿಧ ವಲಯಗಳಲ್ಲಿ ಪತ್ರ ಕರ್ತರ ಮಧ್ಯಸ್ಥಿಕೆಗಳು ಪರಿಣಾಮ ಕಾರಿಯಾಗಿ ಹೊರಹೊಮ್ಮಿದೆ. ಸವಾಲುಗಳ ನಡುವೆಯೂ ಗಡಿನಾಡಿನ ಕನ್ನಡ ಪತ್ರಕರ್ತರು ಸಂಘಟಿತರಾಗಿ ನಡೆಸುತ್ತಿರುವ ಚಟುವಟಿಕೆಗಳು ಇತರೆಡೆಗಳಿಗೆ ಮಾದರಿಯಾದುದು ಎಂದರು.
ಕಾಸರಗೋಡು ಜಿಲ್ಲಾ ಪಂ.ಸದಸ್ಯ ಸೋಮಶೇಖರ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಂಜೇಶ್ವರ ಬ್ಲಾ. ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಾಸ್ತರ್ ಕೆ.ಎಚ್., ಸದಸ್ಯೆ ಶಶಿಕಲಾ ರೈ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾ ಯಣ ತೊಟ್ಟೆತ್ತೋಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಅರಿಬೈಲು ಗೋಪಾಲ ಶೆಟ್ಟಿ, ಪುಷ್ಪರಾಜ್ ಬಿ.ಎಸ್., ಶ್ರೀನಿವಾಸ ನಾಯಕ್ ಇಂದಾಜೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಿವಾನಂದ ಕೋಟ್ಯಾನ್, ಶಿವ ರೆಡ್ಡಿ ಖ್ಯಾಡೆದ್, ಎನ್.ಚನಿಯಪ್ಪ ನಾಯ್ಕ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಂಘಟಕ ಎ.ಆರ್.ಸುಬ್ಬಯ್ಯ ಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭ ಪ್ರಮುಖ ಸಾಧಕ ರಾದ ಗೋನಾಸ್ವಾಮಿ ಬೆಂಗಳೂರು, ಸಂದೀಪ್ ಪುರಂದರ ಶೆಟ್ಟಿ, ಬಿ.ಎ. ಖಾದರ್ ಹಾಜಿ, ಡಾ. ಶಶಿಧರ ಎಚ್. ದೊಡ್ಡಮನಿ, ಝಹೀಂ ಕುಬಣೂರು, ಮೊಹಮ್ಮದ್ ಝಯಾನ್ ಇಸ್ಮಾಯಿಲ್ ಪಿ. ಇವರನ್ನು ದೀಪಕ್ ವಿ.ಕೆ. ಸನ್ಮಾನಿಸಿದರು.
ಮಾಧ್ಯಮ ಕ್ಷೇತ್ರದ ಸಾಧಕರಾದ ಬಿ.ಎಂ. ಹನೀಫ್, ಕುರಿಯ ವಾಸುದೇವ ಎಂ. ಹೊಳ್ಳ, ಡಾ. ಯು.ಎಂ. ರವಿ, ಪುಂಡಲೀಕ ಭೀಮಪ್ಪ ಬಾಲೋಜಿ, ವಿಜಯಲಕ್ಷ್ಮಿ ಶಿಬರೂರು, ಎಚ್.ಇ. ರವಿ ಸೋಮವಾರ ಪೇಟೆ, ವಿಶ್ವನಾಥ್ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಶಂಸುದ್ದೀನ್ ಎಣ್ಮೂರು, ಎ.ಆರ್. ಚಿದಂಬರ ಕೊರಟಗೆರೆ ತುಮಕೂರು, ಕೆ.ಆರ್. ಮಂಜುನಾಥ ಹಾಸನ, ತೆಕ್ಕೇಕರೆ ಶಂಕರನಾರಾಯಣ ಭಟ್, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡ್ ಇವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಂಗಾಧರ ತೆಕ್ಕೆಮೂಲೆ ವಂದಿಸಿದರು. ಸೌಮ್ಯ ಗೌಡ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನೀಸ ಸಲೀಂ, ಸೀತಾರಾಮ ಶೆಟ್ಟಿ ಭಂಡಾರಗುತ್ತು ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ಸುಗಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

You cannot copy contents of this page