10 ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ಬೆಲೆ ಏರಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ದೇಶದಲ್ಲಿ ಇಂಧನ ದರಗಳು ಮತ್ತೊಮ್ಮೆ ಗಗನಕ್ಕೇರಿದೆ. ಇದರಂತೆ ದೇಶಾದ್ಯಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇವಲ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿ ಏರಿಸಲಾಗಿದೆ. ಈ ಪರಿಷ್ಕೃತ ದರದಂತೆ ಪೆಟ್ರೋಲ್ಗೆ ಪ್ರತಿ ಲೀಟರ್ಗೆ ತಲಾ 2.61 ರೂ.ನಂತೆ ಹೆಚ್ಚಿಸಲಾಗಿದ್ದು ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಇದ್ದ 99.51 ರೂ. ನಿಂದ 102.12ಕ್ಕೇರಿದೆ. ಇದೇ ರೀತಿ ಡೀಸೆಲ್ ಬೆಲೆ ಪ್ರತೀ ಲೀಟರ್ ಗೆ 2.76 ರೂ.ನಂತೆ ಹೆಚ್ಚಿಸಲಾಗಿದ್ದು, ಇದರಿಂದ ಡೀಸೆಲ್ ದರ ಲೀಟರ್ಗೆ 92.49 ರೂ.ನಿಂದ 95.20 ರೂ.ಗೇರಿದೆ.
ತಿರುವನಂತಪುರದಲ್ಲಿ ಪೆಟ್ರೋಲ್ ದರ 115.32 ರೂ. ಮತ್ತು ಡೀಸೆಲ್ ಬೆಲೆ 104.41 ರೂ.ಗೇರಿದೆ. ಇತರ ಜಿಲ್ಲೆಗಳಲ್ಲಿ ಸಾಗಾಟ ದರಕ್ಕೆ ಹೊಂದಿಕೊAಡು ದರದಲ್ಲಿ ಮತ್ತೆ ತುಸು ವ್ಯತ್ಯಾಸ ಉಂಟಾಗಲಿದೆ.ಈ ಹಿಂದೆ ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 3 ರೂ.ನಂತೆ, 19ರಂದು ತಲಾ 90 ಪೈಸೆಯಂತೆ ಹಾಗೂ 23ರಂದು ಪೆಟ್ರೋಲ್ಗೆ ಲೀಟರ್ಗೆ 87 ಪೈಸೆ ಮತ್ತು ಡೀಸೆಲ್ಗೆ 91 ಪೈಸೆಯಂತೆ ಹೆಚ್ಚಿಸಲಾಗಿತ್ತು. ಅದಾದ ನಾಲ್ಕನೇ ಬಾರಿ ಇಂದಿನಿAದ ಪೆಟ್ರೋಲ್ಗೆ ಲೀಟರ್ಗೆ 2.61 ರೂ. ಮತ್ತು ಡೀಸೆಲ್ಗೆ 2.71 ರೂ.ನಂತ ಹೆಚ್ಚಿಸಲಾಗಿದ. ಇಂಧನ ಬೆಲೆ ಹೀಗೆ ಹೆಚ್ಚಾಗುತ್ತಿರುವುದು ಆಟೋ ಟ್ಯಾಕ್ಸಿ ವಾಹನಗಳು, ಬಸ್ಗಳ ಸಂಚಾರಕ್ಕೆ ಹೊಡೆತವುಂಟಾಗಿದೆ. ಇದಕ್ಕೆ ಹೊಂದಿಕೊAಡು ಟ್ಯಾಕ್ಸಿಗಳ ಬಾಡಿಗೆ ದರ ಮತ್ತು ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿರುವ ಬೇಡಿಕೆಗಳು ಟ್ಯಾಕ್ಸಿ ವಾಹನಗಳ ಸಂಘಟನೆ ಮತ್ತು ಖಾಸಗಿ ಬಸ್ಗಳ ಮಾಲಕರ ಸಂಘಟನೆಗಳೂ ಸರಕಾರದ ಮುಂದಿರಿಸತೊಡಗಿದೆ.

You cannot copy contents of this page