ನಕಲಿ ಸೌಂದರ್ಯವರ್ಧಕ: ಆರಿಕ್ಕಾಡಿ ನಿವಾಸಿ ಮನೆಗೆ ಅಧಿಕಾರಿಗಳ ದಾಳಿ

 ಕುಂಬಳೆ: ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಫೇಸ್ ಕ್ರೀಂ ವಿತರಣೆ ಕಂಪೆನಿಯ ಪಾಲುದಾರ ನೋರ್ವನ ಮನೆಗೆ ನಿನ್ನೆ ಡ್ರಗ್ಸ್ ಕಂಟ್ರೋಲ್ ಗುಪ್ತಚರ ದಳ ದಾಳಿ ನಡೆಸಿದೆ. ಆರಿಕ್ಕಾಡಿ ಛತ್ರಂಪಳ್ಳ  ನಿವಾಸಿಯ ಮನೆಗೆ ದಾಳಿ ನಡೆಸಿರುವುದಾಗಿಯೂ ಆತ ಈ ವೇಳೆ ಅಲ್ಲಿರಲಿಲ್ಲ. ಅಲ್ಲಿಂದ ಯಾವುದೇ ವಸ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಕುಂಬಳೆ ಶಾಲೆ ರಸ್ತೆಯ ವ್ಯಾಪಾರ ಸಮುಚ್ಛಯದಲ್ಲಿ ಕಾರ್ಯಾಚರಿಸುತ್ತಿದ್ದ ಫೇಸ್ ಕ್ರೀಂ ವಿತರಣೆ ಕಂಪೆನಿಯ ಕುರಿತು ಹೆಚ್ಚಿನ ಮಾಹಿತಿ  ಸಂಗ್ರಹಕ್ಕಾಗಿ ತನಿಖೆ ಮುಂದುವರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವರನ್ನು ಪತ್ತೆಹಚ್ಚಿ ಅವರಿಂದ ಹೇಳಿಕೆ ಸಂಗ್ರಹಿಸಲಾಗುವುದೆಂದೂ ಮಾಹಿತಿಯಿದೆ. ಈ ಸಂಸ್ಥೆಯಲ್ಲಿ ಸುಮಾರು ೫೦ರಷ್ಟು ಯುವತಿಯರು ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.  ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ನಕಲಿ ಸೌಂದರ್ಯವರ್ಧಕಗಳ ವಿರುದ್ಧ ರಾಜ್ಯದಲ್ಲಿ ತನಿಖೆ ತೀವ್ರಗೊಳಿಸಿದ ಬೆನ್ನಲ್ಲೇ  ಕುಂಬಳೆಯಲ್ಲಿ ಫೇಸ್ ಕ್ರೀಮ್ ವಿತರಣೆ ಕಚೇರಿಗಳನ್ನು ಮುಚ್ಚಿ ನೌಕರರು ಪರಾರಿಯಾಗಿದ್ದಾರೆ.

RELATED NEWS

You cannot copy contents of this page