ಕಾಸರಗೋಡು: ಕೇರಳೀಯರಿಗೆದುರಾಗಿರುವ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಆಕ್ಷೇಪ ಪರಾಮರ್ಶೆಗಳು ಅತ್ಯಂತ ಖಂಡನೀಯ ಹಾಗೂ ಪ್ರತಿಭಟನಾರ್ಹವಾಗಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಈ ರೀತಿಯಲ್ಲಿ ಪರಾಮರ್ಶಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಸು ದಾಖಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮುಖ್ಯಮಂತ್ರಿ, ಗೃಹ ಸಚಿವರಿಗೆ ಇ-ಮೇಲ್ ಮೂಲಕ ದೂರು ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ. ಕೇರಳೀಯರು ತಲುಪಿ ಕರ್ನಾಟಕದ ಸಂಸ್ಕೃತಿ ನಾಶಪಡಿಸುತ್ತಿದ್ದಾರೆಂದು, ಗುಂಡ್ಲುಪೇಟೆಯ ಅರ್ಧದಷ್ಟು ಕೇರಳೀಯರು ಸ್ವಾಧೀನಪಡಿಸಿರುವುದಾಗಿಯೂ, ಕೊಡಗು ಸಂಪೂರ್ಣವಾಗಿ ಮಲೆಯಾಳಿಗರ ಅಟ್ಟಹಾಸವಾಗಿದೆ ಎಂದು ದ್ವೇಷ ಹೇಳಿಕೆಗಳನ್ನು ಪ್ರತಾಪ್ ಸಿಂಹ ನೀಡಿರುವುದಾಗಿ ಆರೋಪಿಸಲಾಗಿದೆ.
ಕರ್ನಾಟಕದ ಸಂಸ್ಕೃತಿ ಮಲೆಯಾಳಿಗಳು, ಕೇರಳೀಯರ ಸಂಸ್ಕೃತಿ ಕರ್ನಾಟಕದವರು ಯಾರಿಗೂ ಕಲಿಸಬೇಕಾಗಿಲ್ಲ. ಸಂಸದನಾಗಿದ್ದ ಸಮಯದಲ್ಲಿ ಜನರಿಗೆ ಬೇಕಾಗಿ ಏನನ್ನೂ ಮಾಡಲಾಗದ ಈ ವ್ಯಕ್ತಿ ಪ್ರಚಾರಕ್ಕೆ ಬೇಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇರಳ, ಕರ್ನಾಟಕ, ತಮಿಳುನಾಡು ಎಂದೆಲ್ಲಾ ನಾವು ಹೇಳುತ್ತಿಲ್ಲ. ನಾವು ಭಾರತೀಯರು ಎಂದಷ್ಟೇ ಹೇಳುತ್ತಿರುವುದು. ಭಾರತಕ್ಕೆ ಜಾತ್ಯಾತೀತದ ನೂರಾರು ಮಾದರಿಗಳನ್ನು ತೋರಿಸಿದವರಾಗಿದ್ದಾರೆ ಕೇರಳೀಯರು ಎಂದು ಶಾಸಕರು ನುಡಿದರು. ಕೇರಳದಲ್ಲಿರುವ ಕನ್ನಡ ಭಾಷೆ ಮಾತನಾಡುವ ಶಾಸಕನಾಗಿದ್ದೇನೆ ನಾನು. ಮಲೆಯಾಳಿಗಳು ಯಾವುದೇ ಸಂದರ್ಭದಲ್ಲಿ ಸಂಸ್ಕೃತಿಯನ್ನು ನಾಶಪಡಿಸರು, ಬದಲಾಗಿ ಸಂಸ್ಕೃತಿಯನ್ನು ಉನ್ನತಕ್ಕೇರಿಸಲು ಪ್ರಯತ್ನಿಸುವವರಾಗಿದ್ದಾರೆ. ಈ ವಿಷಯದ ಬಗ್ಗೆ ಕೇರಳದ ಬಿಜೆಪಿ ಘಟಕ ಅಭಿಪ್ರಾಯ ಪ್ರಕಟಿಸಬೇಕು. ಕೇರಳದ ಬಿಜೆಪಿ ಸಹಿತದ ಪಕ್ಷಗಳು ಕೂಡಾ ಈ ವ್ಯಕ್ತಿಯನ್ನು ತಿರಸ್ಕರಿಸಲು ಸಿದ್ಧರಾಗಬೇಕು ಎಂದು ಎಫ್ಬಿಯಲ್ಲಿ ಹಾಕಿದ ಸಂದೇಶದಲ್ಲಿ ಶಾಸಕರು ಸ್ಪಷ್ಟಪಡಿಸಿದ್ದಾರೆ.






