ಕೆಎಸ್‌ಯುನಿಂದ ದ್ವಿಚಕ್ರ ವಾಹನಗಳನ್ನು ದೂಡಿಕೊಂಡು ಪ್ರತಿಭಟನೆ

ಕಾಸರಗೋಡು: ಪೆಟ್ರೋಲ್- ಡೀಸೆಲ್ ಬೆಲೆ ನಿರಂತರ ಹೆಚ್ಚಿಸುತ್ತಿ ರುವುದನ್ನು ಪ್ರತಿಭಟಿಸಿ ಬೈಕ್‌ಗಳನ್ನು ದೂಡಿಕೊಂಡು ಕೆಎಸ್‌ಯು ಪ್ರತಿಭಟಿಸಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಪ್ರೆಸ್‌ಕ್ಲಬ್ ಜಂಕ್ಷನ್‌ನ ಪೆಟ್ರೋಲ್ ಬಂಕ್‌ವರೆಗೆ ಕೆಎಸ್‌ಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಕ್, ಸ್ಕೂಟರ್‌ಗಳನ್ನು ದೂಡಿಕೊಂಡು ಪ್ರತಿಭಟಿಸಿದ್ದಾರೆ. ಮನಾಫ್ ನುಳ್ಳಿಪ್ಪಾಡಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಆದರ್ಶ್ ಕೆ. ಸ್ವಾಗತಿಸಿ, ಅನ್ಸಾರಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ್ ಜೋನ್, ವಿಷ್ಣು ಇರಿಯಣ್ಣಿ, ಸುಜಿತ್ ಎಸ್. ವೈಷ್ಣವ್ ಕೋಳಿಚ್ಚಾಲ್, ಶಜಾಹ್ ಪಟ್ಲ ನೇತೃತ್ವ ನೀಡಿದರು.

You cannot copy contents of this page