ಕಯ್ಯಾರ ಕಿಂಞಣ್ಣರೈಯವರ 111ನೇ ಹುಟ್ಟು ಹಬ್ಬ ಆಚರಣೆ

ಬದಿಯಡ್ಕ: ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 111ನೇ ಹುಟ್ಟುಹಬ್ಬವನ್ನು ಕವಿತಾ ಕುಟೀರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ನೇತೃತ್ವದಲ್ಲಿ ಆಚರಿಸಲಾಯಿತು. ಶಾಸಕ ಮಾಹಿನ್ ಕಲ್ಲಟ್ರ ಪುಷ್ಪಾರ್ಚನೆ ನಡೆಸಿದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಅಖಿಲೇಶ್ ನಗುಮುಗಂ, ಚನಿಯಪ್ಪ ನಾಯ್ಕ್, ಮಹೇಶ್ ವಳಕುಂಜ, ಹರೀಶ್ ಗೋಸಾಡ, ನಿವೃತ್ತ ಪ್ರೊ. ಎ. ಶ್ರೀನಾಥ್, ಶಂಕರನಾರಾಯಣ ಭಟ್, ಗಂಗಾಧರ ತೆಕ್ಕೆಮೂಲೆ, ಆನಂದ ಮವ್ವಾರು, ಜಯಪ್ರಕಾಶ್ ಶೆಟ್ಟಿ, ರವಿರಾಜ ರೈ, ದುರ್ಗಾಪ್ರಸಾದ್ ರೈ, ರಂಗನಾಥ ರೈ, ಪ್ರಸನ್ನ ರೈ ಉಪಸ್ಥಿತರಿದ್ದರು. ಇದೇ ವೇಳೆ ಕೇಂದ್ರೀಯ ವಿ.ವಿ.ಯಿಂದ ರ‍್ಯಾಂಕ್ ಪಡೆದ ಜ್ಯೋತಿರ್ಲಕ್ಷ್ಮಿಯನ್ನು ಗೌರವಿಸಲಾಯಿತು.
 

RELATED NEWS

You cannot copy contents of this page