ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ

ಮಂಜೇಶ್ವರ: ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ ಸುಂಕದಕಟ್ಟೆ ಬಿಜೆಪಿ ಕಾರ್ಯಾಲಯ ದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ವನಿತಾ ಜೆ. ನಾÊಕ್‌ರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ. ಪಂಚಾಯತ್ ಸದಸ್ಯರಾದ ಚಂದ್ರಶೇಖರ ವರ್ಕಾಡಿ, ತುಳಸಿ ವರ್ಕಾಡಿ, ರವಿ ಎಂ.ಕೆ. ಕೋಳ್ಯೂರು ಶುಭಾಶಂಸನೆಗೈದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಸಮಾರೂಪ ಭಾಷಣ ಮಾಡಿದರು. ನೂತನ ಸಮಿತಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಸುನಿಲ್ ಬಟ್ಟೆಕಲ್ಲು, ಉಪಾಧ್ಯಕ್ಷರಾಗಿ ಉಮೇಶ್ ಮಂಟಮೆ, ಶ್ರೀಧರ ತಿಮ್ಮಂಗರಾನೆ, ಉಮೇಶ್ ಅರಿಂಗುಳ, ಕಾರ್ಯದರ್ಶಿ ರವೀಂದ್ರ ಕುಲಾಲ್, ಜೊತೆ ಕಾರ್ಯದರ್ಶಿಗಳಾಗಿ ಗೋಪಾಲ ದೈಗೋಳಿ, ಗಿರೀಶ್ ಪಾವಳ, ಚಿದಾನಂದ, ಕೋಶಾಧಿಕಾರಿ ವನಿತಾ ಜೆ ನಾÊಕ್ ಹಾಗೂ ಸದಸ್ಯರನ್ನು ಆರಿಸಲಾಯಿತು. ರವೀಂದ್ರ ಕುಲಾಲ್ ಸ್ವಾಗತಿಸಿ, ಸುನಿಲ್ ಬಟ್ಟೆಕಲ್ಲು ವಂದಿಸಿದರು.

RELATED NEWS

You cannot copy contents of this page