ಕಾಸರಗೋಡು: ವಿಧಾನಸಭಾ ಚುನಾವಣೆಯ ಬಳಿಕ ಜನರ ಮನಸ್ಸಲ್ಲಿ ಪ್ರಧಾನ ವಿಪಕ್ಷದ ಪಾತ್ರವನ್ನು ಬಿಜೆಪಿ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಶಬರಿಮಲೆ ಚಿನ್ನ ದರೋಡೆ, ಸಿಎಂಆರ್‌ಎಲ್- ಎಕ್ಸಾಲಾಜಿಕ್ ಅವ್ಯವಹಾರ ಸಹಿತ ವಿವಿಧ ವಿಷಯಗಳನ್ನು ವಿಧಾನಸಭೆಯ ಹೊರಗೆ ಹಾಗೂ ಒಳಗೆ ಬಿಜೆಪಿ ಶಾಸಕರು ಮತ್ತೆ ಸಕ್ರಿಯಗೊಳಿಸಿರುವುದಾಗಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಅವರು ಹೇಳಿದರು.
ಬಿಜೆಪಿಯ ಆಶಯ, ಇತಿಹಾಸ, ಕಾರ್ಯಯೋಜನೆ, ಉದ್ದೇಶ ಎಂಬಿವುಗಳ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಉಂಟುಮಾಡುವುದು ಎಂಬ ಉದ್ದೇಶದೊಂದಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರು ವರ್ಷ ಕಾಲಾವಧಿಯಲ್ಲಿ ಸದಸ್ಯತ್ವ ವಿತರಣೆ, ಪದಾಧಿಕಾರಿಗಳ ಚುನಾವಣೆ, ತರಬೇತಿ ಎಂಬಿವು ಸರಿಯಾಗಿ ಜ್ಯಾರಿಗೊಳಿಸುವ ಏಕ ರಾಜಕೀಯ ಪಕ್ಷವಾಗಿದೆ ಬಿಜೆಪಿ ಎಂದುಅವರು ನುಡಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಜಿಲ್ಲಾ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ ಮಾತನಾಡಿದರು.






