ಜುಗಾರಿ ಕೇಂದ್ರದಿಂದ 6 ಮಂದಿ ಸೆರೆ: 49,740 ರೂ. ವಶ

ಕಾಸರಗೋಡು: ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿ ೪೯,೭೪೦ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಡ್ಕ  ಮಾರಿಪಡ್ಪು ಎಂಬಲ್ಲಿನ ರಬ್ಬರ್ ತೋಟದಲ್ಲಿ ಟೆಂಟ್ ಹಾಕಿ ಜೂಜಾಟ ದಂಧೆ ನಡೆಸಲಾಗುತ್ತಿತ್ತು. ಬಂದಡ್ಕ ಚಿಕ್ಕಂಡಮೂಲೆ ಕೋಟಪದವು ನಿವಾಸಿ ಕೆ.ಜಿ. ಅನಿಲ್ ಕುಮಾರ್ (50) , ಪನತ್ತಡಿ ಚೆರುಪನತ್ತಡಿ ಮಲಾಂಕುಡ್ ಅರಿಮಣಲ್ ನಿವಾಸಿ ಎಬಿ. ರೋಯಿ (50). ಚೆರುಪನತ್ತಡಿ ಸೈಂಟ್ ಮೇರಿಸ್  ಕಾಲೇಜು ಬಳಿಯ ಪೂಕಾಂಬೆ ಹೌಸ್‌ನ ಪಿ.ಎಂ. ಶಿಬು (54), ಕರಿವೇಡಗಂ ಮಾರಿಪಡ್ಪು ಕುನ್ನೇಲ್ ನಿವಾಸಿ ಎನ್.ಕೆ. ಪ್ರಕಾಶನ್ (49), ಬಂದಡ್ಕ ಪೆಟ್ರೋಲ್ ಬಂಕ್ ಸಮೀಪದ ಪಿ.ಕೆ. ಅಶ್ರಫ್ (47), ಕಳ್ಳಾರ್ ಕೋಳಚ್ಚಾಲ್ ಹದಿನೆಂಟನೇ ಮೈಲು ಎ.ಕೆ.ಜಿ ನಗರದ ಬಿ. ವಿನೋದ್ (41) ಎಂಬಿವರನ್ನು ಬೇಡಗಂ ಎಸ್.ಐ ಸಿ.ಎಂ ಸಾಬು ಹಾಗೂ ತಂಡ ಬಂಧಿಸಿದೆ. ಗುಪ್ತ ಮಾಹಿತಿ ಆಧಾರದಲ್ಲಿ ಇಂದು ಮುಂಜಾನೆ ಪೊಲೀಸರು ದಾಳಿ ನಡೆಸಿ ಜುಗಾರಿ ನಿರತರನ್ನು ಬಂಧಿಸಿದ್ದಾರೆ.

ಪೊಲೀಸ್  ತಂಡದಲ್ಲಿ ಸೀನಿಯರ್ ಸಿವಿಲ್  ಪೊಲೀಸ್ ಆಫೀಸರ್‌ಗಳಾದ ಟಿ. ರಜೀಶ್, ಸುಭಾಶ್‌ಚಂದ್ರನ್, ಸಿವಿಲ್ ಪೊಲೀಸ್ ಆಫೀಸರ್ ವಿನೋದ್ ಎಂಬಿವರಿದ್ದರು.

RELATED NEWS

You cannot copy contents of this page