ಕೂದಲು ತೆಗೆಸಲು ತಲುಪಿದ ಬಾಲಕನಿಗೆ ದೌರ್ಜನ್ಯ: ಬಾರ್ಬರ್ ಶಾಪ್‌ಗೆ ಆಕ್ರಮಣ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಮಸೀದಿ ಸಮೀಪದ ಬಾರ್ಬರ್ ಶಾಪ್ ವಿರುದ್ಧ ಆಕ್ರಮಣವುಂಟಾಗಿದೆ. ಅಂಗಡಿ ಮಾಲಕಿಯಾದ ಯುವತಿ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿಖಿಲ್, ಅನೂಪ್, ಗುರುತುಪತ್ತೆಹಚ್ಚ ಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ.

ಆದಿತ್ಯವಾರ ರಾತ್ರಿ 10 ಗಂಟೆ ವೇಳೆ ಬಾರ್ಬರ್ ಶಾಪ್‌ನ ಬೀಗ ಹಾಗೂ ಬೋ ರ್ಡ್ ನಾಶಪಡಿಸಿ ಇನ್ನೊಂದು ಬೋರ್ಡನ್ನು ತೆಗೆದುಕೊಂಡು ಹೋಗಿ 15,೦೦೦ ರೂ. ನಷ್ಟ ಉಂಟುಮಾಡಲಾಗಿದೆ ಎಂದು ಚಂದೇರ ಪೊಲೀಸರು ದಾಖಲಿ ಸಿದ ಕೇಸಿನಲ್ಲಿ ವಿವರಿಸಲಾಗಿದೆ.

ಇತ್ತೀಚೆಗೆ ಈ ಬಾರ್ಬರ್ ಶಾಪ್‌ಗೆ  ಕೂದಲು ತೆಗೆಸಲೆಂದು ತಲುಪಿದ ಪ್ರಾಯ ಪೂರ್ತಿಯಾಗದ ಗಂಡು ಮಗುವನ್ನು ದೌರ್ಜನ್ಯಗೈದ ಘಟನೆಯಲ್ಲಿ ಚಂದೇರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದರು. ಪ್ರಸ್ತುತ ಕೇಸಿನಲ್ಲಿ 16ರ ಹರೆಯದ ಬಾರ್ಬರನ್ನು ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. 

RELATED NEWS

You cannot copy contents of this page