ಕಾಸರಗೋಡು: ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದೆ. ಇದರಿಂದಾಗಿ ಮೀನುಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸಿ ಆ ಮೂಲಕ ಮತ್ಸ್ಯ ಸಂಪತ್ತನ್ನು ವೃದ್ಧಿಗೊಳಿಸಿ ಸಂರಕ್ಷಿಸುವ ಸಲುವಾಗಿ ಪ್ರತೀವರ್ಷ ಏರ್ಪಡಿಸುವ ರೀತಿಯಲ್ಲಿ ಆಳ ಸಮುದ್ರದಲ್ಲಿ ಮೀನುಗಾ ರಿಕೆಯನ್ನು ತಡೆಗಟ್ಟುವ ಟ್ರೋಲಿಂಗ್ ನಿಷೇಧ ರಾಜ್ಯದಲ್ಲಿ ಇಂದು ತಡರಾತ್ರಿ 12 ಗಂಟೆಗೆ ಜ್ಯಾರಿಗೊಳ್ಳಲಿದೆ. ಇದು ಜುಲೈ 31ರ ತನಕ ಅಂದರೆ 52 ದಿನಗಳ ಕಾಲ ಮುಂದುವರಿಯಲಿದೆ. ಇದರಂತೆ ಮೀನುಗಾರಿಕಾ ಬೋಟ್‌ಗಳು ಇಂದು ರಾತ್ರಿ ದಡ ಸೇರಿ ಸುರಕ್ಷಿತ ತಾಣಗಳಿಗೆ ಸೇರಲಿದೆ.
ಟ್ರೋಲಿಂಗ್ ನಿಷೇಧ ಜ್ಯಾರಿಯ ಲ್ಲಿರುವ ತನಕ ಕೇರಳದ ವ್ಯಾಪ್ತಿಗೆ ಸೇರಿದ ಆಳ ಸಮುದ್ರದಲ್ಲಿ ಯಾರೂ ಮೀನುಗಾರಿಕೆ ನಡೆಸುವಂತಿಲ್ಲ.ಈ ನಿಷೇಧವನ್ನು ಉಲ್ಲಂಘಿಸಿದಲ್ಲಿ ಬೋಟ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು., ಮಾತ್ರವಲ್ಲ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಶಿಕ್ಷಾ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನಿಷೇಧ ಜ್ಯಾರಿಯಲ್ಲಿರುವ ಮುಂದಿನ 52 ದಿನಗಳು ಬೆಸ್ತರು ಕೆಲಸವಿಲ್ಲದೆ ತಮ್ಮ ಆದಾಯ ಮಾರ್ಗವನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಮೀನುಗಾರಿಕಾ ಇಲಾಖೆಯ ಲೆಕ್ಕಾಚಾರದಂತೆ ಜಿಲ್ಲೆಯಲ್ಲಿ ಒಟ್ಟು 129 ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿವೆ. ಇದರಲ್ಲಿ ಕಾಸರಗೋಡು ಕಸಬಾದ 12, ಮಂಜೇಶ್ವರ 13, ಕುಂಬಳೆ ಆರಿಕ್ಕಾಡಿಯ 4, ಹೊಸದುರ್ಗ 18, ತೈಕಡಪ್ಪುರ 22, ನೀಲೇಶ್ವರ 13, ಮಡಕರ 30 ಮತ್ತು ಪಡನ್ನಕಡಪ್ಪು ರದಲ್ಲಿ 7 ಯಾತ್ರೀಕೃತ ಬೋಟ್‌ಗಳು ಒಳಗೊಂಡಿವೆ. ಈ ಲೆಕ್ಕಾಚಾರವನ್ನು ಮೀರಿ ಜಿಲ್ಲೆಯ ವಿವಿಧ ಮೀನುಗಾರಿಕಾ ಕೇಂದ್ರಗಳಲ್ಲಾಗಿ 200ರಷ್ಟು ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಗಾಗಿ ಸಮುದ್ರಕ್ಕಿಳಿ ಯುತ್ತಿವೆಯೆಂಬ ಲೆಕ್ಕಾಚಾರವೂ ಇನ್ನೊಂದೆಡೆ ಇದೆ.






