ಕಡಲ್ಕೊರೆತ: ಚೇರಂಗೈ ಕಡಪ್ಪುರದ  ಕುಟುಂಬಗಳಿಗೆ ಆತಂಕದ ಬದುಕು

ಕಾಸರಗೋಡು: ಮಳೆ ತೀವ್ರಗೊಳ್ಳುತ್ತಿರುವಂತೆಯೇ ತೀರ ನಿವಾಸಿಗಳು ಆತಂಕದಲ್ಲಿದ್ದಾರೆ. ಕಡಲ್ಕೊರೆತ ಭಯದಲ್ಲಿ ಜಿಲ್ಲೆಯ ಸಮುದ್ರತೀರದ ಹಲವಾರು ಕುಟುಂಬಗಳು ಸಂಕಷ್ಟದಲ್ಲಿವೆ. ಚೇರಂಗೈ ಕಡಪ್ಪುರದಲ್ಲಿ ದಶಕಗಳಿಂದ ಕಡಲ್ಕೊರೆತದ ಭೀತಿಯಲ್ಲಿ ಕುಟುಂಬಗಳು ಜೀವನ ಸಾಗಿಸುತ್ತಿವೆ.

ಈ ಕಡಪ್ಪುರದಲ್ಲಿ ಜಿಯೋ ಬ್ಯಾಂಗ್ ಜೋಡಿಸಿಟ್ಟಿಡುವ ಪ್ರತಿರೋಧ ಸಾಮಾನ್ಯವಾಗಿ ನಡೆಯುತ್ತಿರುವುದೆಂದು ಹೇಳಲಾಗುತ್ತಿದೆ. ಆದರೂ ಮಳೆಗಾಲದಲ್ಲಿ ತೆರೆಗಳು ಮನೆಗಳಿಗೆ ತಲುಪುತ್ತದೆ ಎಂದು ದೂರಲಾಗಿದೆ. ಕಿರು ನೀರಾವರಿ ಇಲಾಖೆ ಕಳೆದ ವರ್ಷ ಜಿಲ್ಲೆಯ ತೀರ ವಲಯದಲ್ಲಿ ಜ್ಯಾರಿಗೊಳಿಸಬೇಕಾದ ಯೋಜನೆಗಳ ನಿರ್ದೇಶವನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಅದರಲ್ಲಿ ಯಾವುದೇ ಕ್ರಮ ಉಂಟಾಗಿರಲಿಲ್ಲ.

ಇದೇ ವೇಳೆ ಉದುಮ, ತೃಕ್ಕನ್ನಾಡ್‌ನಲ್ಲಿ ತಾತ್ಕಾಲಿಕ ಕ್ರಮ ಎಂಬ ನೆಲೆಯಲ್ಲಿ ಕಗ್ಗಲ್ಲುಗಳನ್ನು ತಂದು ಹಾಕಿ ಭಿತ್ತಿ ನಿರ್ಮಿಸಲು ನಡೆಸಿದ ಯತ್ನ ಸಂದಿಗ್ಧತೆಯಲ್ಲಿದೆ.

You cannot copy contents of this page