ಮಂಜೇಶ್ವರ: ಹೊಸಂಗಡಿ-ಆನೆಕಲ್ಲು ಮಧ್ಯೆ ರಸ್ತೆಯ ಇಕ್ಕೆಡೆಗಳಲ್ಲಿ ಮರಗಳು ಭಾಗಿಕೊಂಡು ಮಳೆ ಗಾಳಿಗೆ ದsರಾಶಾಹಿಯಾಗುವ ಭೀತಿ ವಾಹನ ಸವಾರರನ್ನು ಕಾಡುತ್ತಿದೆ. ಮಳೆಗಾಲ ಬಂತೆAದರೆ ಈ ರಸ್ತೆಯಲ್ಲಿ ಸಂಚಾರ ಆತಂಕ ಉಂಟುಮÁಡುತ್ತಿದೆ. ಲೋ ಕೋಪಯೋಗಿ ಇಲಾಖೆಯ ಈ ರಸ್ತೆ ಕರ್ನಾಟಕವನ್ನು ಸಂಪರ್ಕಿಸುತ್ತಿದೆ. ಈ ರಸ್ತೆಯ ಹೊಸಂಗಡಿ, ಮಜೀರ್ಪಳ್ಳ ಸಹಿತ ಆನೆಕಲ್ಲು ತನಕ ವಿವಿಧ ಕಡೆಗಳಲ್ಲಿ ಅಕೇಶಿಯ ಸಹಿತ ಇತರ ಮರಗಳು ಮುರಿದು ಬೀಳುವ ಸ್ಥಿತಿಯಲ್ಲಿ ರಸ್ತೆಗೆ ಭಾಗಿಕೊಂಡು ಭೀತಿ ಸೃಷ್ಟಿಯಾಗಿದೆ. ಶಾಲಾ ವಾಹನಗಳು, ಬಸ್‌ಗಳು ಸಹಿತ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಈ ರಸ್ತೆಯ ವಿವಿಧ ಕಡೆಗಳಲ್ಲಿ ಮಣ್ಣು ಸಹಿತ ಮರಗಳು ಕುಸಿದು ಬಿದ್ದು ರಸ್ತೆ ತಡೆ ಹಾಗೂ ವಾಹನಗಳಿಗೆ ಹಾನಿ ಉಂಟಾಗಿರುವುದಾಗಿ ದೂರಲಾಗಿತ್ತÄ. ಸಂಬAಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಪಾಯದ ಭೀತಿ ಇರುವ ಮರ ಹಾಗೂ ರೆಂಬೆ ಗಳನ್ನು ತೆರವುಗೊಳಿಸದೆ ಇರುವುದು ಅನಾಹುತಕ್ಕೆ ಕಾರಣವಾಗಬಹುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ರಸ್ತೆಗೆ ಭಾಗಿಕೊಂಡಿರುವ ಹಾಗೂ ಕುಸಿದು ಬೀಳಲು ಸಿದ್ದಗೊಂಡಿರುವ ಮರಗಳನ್ನು ಕೂಡಲೇ ತೆರವುಗೊಳಿಸಿ ಜನರ ಸುರಕ್ಷತೆಯನ್ನು ಕಾಪಾಡಬೇಕೆಂದು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ ಒತ್ತಾಯಿಸಿದ್ದಾರೆ.







