ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ಬಳಿಕ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಮೂಲತಃ ಕಾಸರಗೋಡು ಚೌಕಿ ನಿವಾಸಿಯೂ ಕುಂಬಳೆ ಮಾವಿನಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹಬೀಬ್ ಯಾನೆ ಅಭಿಲಾಷ್ (31)ನ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿರುವುದು. ಇದೇ ವೇಳೆ ಮೃತದೇಹವನ್ನು ಪಡೆದುಕೊಳ್ಳಲು ಯಾರೂ ಸಿದ್ಧರಾ ಗದ ಹಿನ್ನೆಲೆಯಲ್ಲಿ ಪಯ್ಯನ್ನೂರಿನಲ್ಲಿ ರುವ ಸಿ.ಎಚ್. ಸೆಂಟರ್ ಮೃತದೇಹದ ಅಂತ್ಯಸಂಸ್ಕಾರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಮೃತದೇಹವನ್ನು ಪಡೆದುಕೊಳ್ಳಲು ಯಾರೂ ಮುಂದಾಗದಿರುವುದರಿಂದ ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಮಂಡಲ ಮುಸ್ಲಿಂ ಲೀಗ್ ಕಾರ್ಯ ದರ್ಶಿ ಎ.ಕೆ. ಆರೀಫ್, ಶಾಸಕ ಎನ್.ಎ. ನೆಲ್ಲಿಕುನ್ನು ಮೊದಲಾದವರು ಸಿ.ಎಚ್. ಸೆಂಟರ್‌ನ ಪದಾಧಿಕಾರಿಗಳನ್ನು ಭೇಟಿ ಯಾಗಿದ್ದಾರೆ. ಬಳಿಕ ಪಯ್ಯನ್ನೂರು ಸಿಎಚ್‌ಸೆಂಟರ್ ಸಮೀಪ ಮೃತದೇಹದ ಅಂತ್ಯಸಂ ಸ್ಕಾರ ನಡೆಸಲು ನಿರ್ಧರಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಕುಂಬಳೆ ಬದರ್ ಜುಮಾ ಮಸೀದಿ ಸಮೀಪದ ಸರ್ವೀಸ್ ರಸ್ತೆ ಬದಿಯಲ್ಲಿ ಹಬೀಬ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ನಡೆಸಿದ ತಪಾಸಣೆ ವೇಳೆ ಹಬೀಬ್ ಇಲಿ ವಿಷ ಸೇವಿಸಿರುವುದಾಗಿ ತಿಳಿದುಬಂದಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಹಬೀಬ್‌ನನ್ನು ವೈದ್ಯರ ನಿರ್ದೇಶ ಮೇರೆಗೆ ಪರಿಯಾರಂಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿತ್ತು.
ಕುಂಬಳೆ ಶಾಂತಿಪಳ್ಳ ನಿವಾಸಿ ಯಾದ ಸಮೂಸ ರಶೀದ್ ಎಂಬಾ ತನನ 2023 ಅಕ್ಟೋಬರ್ ತಿಂಗಳಲ್ಲಿ ತಲೆಗೆ ಕಲ್ಲುಹಾಕಿ ಕೊಲೆಗೈದ ಪ್ರಕರಣದಲ್ಲಿ ಹಬೀಬ್ ಆರೋಪಿ ಯಾಗಿದ್ದಾನೆ. ಕುಂಬಳೆ ಐಎಚ್‌ಆರ್‌ಡಿ ಕಾಲೇಜು ಸಮೀಪದ ಮೈದಾನದ ಪೊದೆಗಳೆಡೆಯಲ್ಲಿ ಕಾಸರಗೋಡಿನ ಶಾನು ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿಯಾದ ಸಮೂಸ ರಶೀದ್‌ನ ಮೃತದೇಹ ಪತ್ತೆಯಾಗಿತ್ತು. 2019ರಲ್ಲಿ ಶಾನು ಕೊಲೆಗೀಡಾಗಿದ್ದರು. ಕಾಸರಗೋಡು ಪೊಲೀಸ್ ಠಾಣೆ ಸಮೀಪದ ನಾಯಕ್ಸ್ ರಸ್ತೆ ಬಳಿಯ ಜನವಾಸವಿಲ್ಲದ ಹಿತ್ತಿಲಿನಲ್ಲಿರುವ ಬಾವಿಯಲ್ಲಿ ಶಾನುವಿನ ಮೃತದೇಹ ಕಂಡುಬಂದಿತ್ತು. ಕುತ್ತಿಗೆ ಕೊಯ್ದು ಕೊಲೆಗೈದ ಬಳಿಕ ಮೃತದೇಹವನ್ನು ಪಾಳು ಬಾವಿಗೆ ಎಸೆದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿತ್ತು. ಸಮೂಸ ರಶೀದ್‌ನ ಕೊಲೆ ಪ್ರಕರಣ ಮಾತ್ರವಲ್ಲದೆ ಕೊಲೆಯತ್ನ, ಅಪಹರಣ, ಗಾಂಜಾ ಸಾಗಾಟ, ಕಾಪಾ ಪ್ರಕರಣಗಳಲ್ಲಿ ಹಬೀಬ್ ಯಾನೆ ಅಭಿಲಾಷ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.






