ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ: ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಜಿಲ್ಲೆಯವರೇ ಆಗಿರುವ ನಿತಿನ್‌ರಾಜ್ ಪಿ. ನೇಮಕ

ಕಾಸರಗೋಡು: ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳನ್ನು ಅತ್ತಿತ್ತ ವರ್ಗಾಯಿಸಲಾಗಿದ್ದು, ಇದರಂತೆ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯನ್ನಾಗಿ ಕಾಸರಗೋಡು ಜಿಲ್ಲೆಯವರೇ ಆಗಿರುವ  ರಾವಣೇಶ್ವರ ನಿವಾಸಿ ನಿತಿನ್‌ರಾಜ್ ಪಿ.ರನ್ನು ನೇಮಿಸಲಾಗಿದೆ. ಇವರು ಈಗ ಕಣ್ಣೂರು ಸಿಟಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿಂದ ಅವರನ್ನು ತಮ್ಮ ಹುಟ್ಟೂರಾದ ಕಾಸರಗೋಡು ಜಿಲ್ಲೆಗೆ ವರ್ಗಾಯಿಸಿ ನೇಮಿಸಲಾಗಿದೆ. ಈಗ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬಿ.ವಿ. ವಿಜಯ್ ಭರತ್ ರೆಡ್ಡಿಯವರನ್ನು ಇಲ್ಲಿಂದ ವರ್ಗಾಯಿಸಿ ಕಣ್ಣೂರು  ಸಿಟಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ. ನಿತಿನ್‌ರಾಜ್‌ರನ್ನು ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯನ್ನಾಗಿ ನೇಮಿಸುವ ಮೂಲಕ ಜಿಲ್ಲೆಯವರೇ ಇಲ್ಲಿನ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ನೇಮಿಸಲ್ಪಟ್ಟ ಮೊದಲ ಐಪಿಎಸ್ ಪೊಲೀಸ್ ಅಧಿಕಾರಿಯಾಗಿ ದ್ದರೆಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

2018ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 210ನೇ ರ‍್ಯಾಂಕ್‌ನಲ್ಲಿ ಉತ್ತೀರ್ಣರಾಗಿ, 2019ರಲ್ಲಿ ಎಎಸ್‌ಪಿಯಾಗಿ ವಯನಾಡಿನಲ್ಲಿ ಪೊಲೀಸ್ ವೃತ್ತಿಜೀವನ ಆರಂಭಿಸಿದ್ದರು. ನಂತರ ಇವರು ಹಲವು ಜಿಲ್ಲೆಗಳಲ್ಲಿ ಉನ್ನತ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಂತ ಜಿಲ್ಲೆಯಾದ ಕಾಸರಗೋಡಿಗೆ ವರ್ಗಾವಣೆಗೊಂ ಡಿದ್ದಾರೆ. ರಾವಣೇಶ್ವರಕ್ಕೆ ಸಮೀಪದ ಕಳರಿಕ್ಕಲ್‌ನ ರಾಜೇಂದ್ರನ್- ಪಿ. ಲತ ದಂಪತಿ ಪುತ್ರನಾಗಿರುವ ನಿತಿನ್‌ರಾಜ್ ರಾವಣೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಹೊಸದುರ್ಗದ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ ನಂತರ ಕೋಟಯಂ ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲ ಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ನಂತರ ಅವರು ಇಂಜಿನಿ ಯರ್ ಸೇವೆಯ ಬದಲು ಪೊಲೀ ಸ್ ವೃತ್ತಿಜೀವನ ಆರಂಭಿಸಿದ್ದರು. ಇದರ ಹೊರತಾಗಿ ರಾಜ್ಯದ 30 ಉನ್ನತ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಇದರಂತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪಾಲಿಸುವ ಎಡಿಜಿಪಿಯನ್ನಾಗಿ ವಿಜಯ್‌ರನ್ನು ನೇಮಿಸಲಾಗಿದೆ. ರಾಜ್ಯ ಸೈಬರ್ ಸೆಲ್‌ನ ಹೆಚ್ಚುವರಿ ಹೊಣೆಗಾರಿಕೆಯನ್ನು ಇವರಿಗೆ ವಹಿಸಿಕೊಡಲಾಗಿದೆ. ಇವರೂ ಸೇರಿದಂತೆ ೩೦ರಷ್ಟು ಉನ್ನತ ಪೊಲೀಸ್ ಅಧಿಕಾರಿಗಳನ್ನು ಸ್ಥಾನಪಲ್ಲಟಗೊಳಿಸಲಾಗಿದೆ.

RELATED NEWS

You cannot copy contents of this page