ಕೂಲಿ ಕಾರ್ಮಿಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೂಲಿ ಕಾರ್ಮಿಕನೋರ್ವ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧೂರು ಕೊಲ್ಯದ ದಿವಂಗತರಾದ ಪಂಜಿ-ಚೋಮು ದಂಪತಿಯ ಪುತ್ರ ಕೃಷ್ಣ (45) ಮೃತಪಟ್ಟ ವ್ಯಕ್ತಿ.  ನಿನ್ನೆ ಮಧ್ಯಾಹ್ನ ಬಳಿಕ ಇವರು ನಾಪತ್ತೆಯಾಗಿದ್ದ ರೆನ್ನಲಾಗಿದೆ. ಇದರಿಂದ ಮನೆಯ ವರು ಹುಡುಕಾಟ ಆರಂಭಿಸಿದ್ದರು. ಶೋಧ ವೇಳೆ ಇಂದು ಬೆಳಿಗ್ಗೆ ೬ ಗಂಟೆಗೆ ಮನೆಯ ಹಿತ್ತಿಲಲ್ಲಿರುವ ಉಪಯೋಗಶೂನ್ಯವಾದ ಆವರಣ ವಿಲ್ಲದ ಬಾವಿಯಲ್ಲಿ  ಕೃಷ್ಣರ ಮೃತದೇ ಹ ಪತ್ತೆಯಾಗಿದೆ.   ಮೃತದೇಹವನ್ನು  ಅಗ್ನಿಶಾಮಕದಳ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಅವಿವಾಹಿತನಾದ ಮೃತರು ಸಹೋದರ-ಸಹೋದರಿಯರಾದ ರಮೇಶ,ಜಯರಾಮ, ಪದ್ಮಾವತಿ, ದೇವಕಿ,ಲೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page