ಆನೆದಂತ ವಶ: ಮಂಜೇಶ್ವರ ನಿವಾಸಿ ಸಹಿತ ಮೂವರ ಸೆರೆ

ಮಂಜೇಶ್ವರ: ಲಕ್ಷಾಂತರ ರೂಪಾಯಿ ಮೌಲ್ಯದ ಆನೆ ದಂತಗಳ ಸಹಿತ ಮಂಜೇಶ್ವರ ನಿವಾಸಿ ಸೇರಿ ಮೂರು ಮಂದಿ ಮಂಗಳೂರಿನಲ್ಲಿ ಸೆರೆಗೀಡಾಗಿ ದ್ದಾರೆ. ಮಂಜೇಶ್ವರದ ಅಬ್ದುಲ್ ಖಾದರ್, ಬೆಳ್ತಂಗಡಿಯ ಶಶಾಂಕ, ಅತ್ತಾವರದ ಪ್ರಭಾಚಂದ್ರ ಎಂಬಿವರನ್ನು ಬೆಂಗಳೂರು- ಮಡಿಕೇರಿ ಫಾರೆಸ್ಟ್ ಎಸ್‌ಪಿ ಪವನ್ ನೆಜ್ಜೂರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆನೆ ದಂತಗಳನ್ನು ಮಾರಾಟಗೈಯ್ಯಲು ತಂಡವೊಂದು ಮಂಗಳೂರಿನ ಮರೋಳಿಗೆ ಬರುತ್ತಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ೪೨.೭೦೦ ಕಿಲೋ ತೂಕದ ಎರಡು ಆನೆ ದಂತಗಳು ಪತ್ತೆಯಾಗಿವೆ.  ತಂಡಕ್ಕೆ ಆನೆ ದಂತಗಳು ಎಲ್ಲಿಂದ ಲಭಿಸಿದೆ ಎಂದು ತಿಳಿದು ಬಂದಿಲ್ಲ. ಈ ಕುರಿತಾಗಿ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಲಾಗಿದೆ. ಪೊಲೀಸ್ ತಂಡದಲ್ಲಿ ಮಂಗಳೂರು ಸಿಐಡಿ ಸಬ್ ಇನ್ಸ್‌ಪೆಕ್ಟರ್ ಜಿ.ಆರ್. ದಿಲೀಪ್, ಕೆ.ಟಿ. ಜಯರಾಮ, ಕೆ.ಎಂ. ಬಾಲಕೃಷ್ಣ, ಎಸ್. ತಾರಾ ನಾಧ, ಅಬ್ದುಲ್ ರೌಫ್ ಎಂಬಿವರಿದ್ದರು.

RELATED NEWS

You cannot copy contents of this page