ಎಲ್ಲಾ ರೈತರಿಗೆ ಉಚಿತ ವಿದ್ಯುತ್ ನೀಡಲು  ಕಲ್ಲಗ ಚಂದ್ರಶೇಖರ ರಾವ್ ಸಚಿವರಿಗೆ ಮನವಿ

ಬೆಳ್ಳೂರು: ಕೇರಳದಲ್ಲಿ ಕೃಷಿ ನೀರಾವರಿ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವಂತೆ ಆಗ್ರಹಿಸಿ ವಿದ್ಯುತ್ ಇಲಾಖೆ ಸಚಿವ ಸನ್ನಿ ಜೋಸೆಫ್‌ರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲ್ಲಗ ಚಂದ್ರಶೇಖರ್ ರಾವ್ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಈ ಮನವಿ ಸಲ್ಲಿಸಲಾಗಿದೆ. ಈಗ ಕೇರಳದಲ್ಲಿ ೫ ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೆಚ್ಚು ಭೂಮಿ ಹೊಂದಿರುವ ಹಿಡುವಳಿಧಾರರಿಗೂ ವಿಸ್ತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕರ್ನಾಟಕದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಈಗಾಗಲೇ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಮಾದರಿಯನ್ನು ಕೇರಳದಲ್ಲಿ ಜ್ಯಾರಿಗೊಳಿ ಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ರೈತರ ವಿದ್ಯುತ್ ಶುಲ್ಕವನ್ನು ಕೃಷಿ ಭವನಗಳು ಪಾವತಿಸಬೇಕಾಗಿದ್ದು, ಆದರೆ ರಾಜ್ಯ ವಿದ್ಯುತ್ ಮಂಡಳಿ ರೈತರಿಗೆ ನೇರವಾಗಿ ನೋಟೀಸ್ ನೀಡುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

You cannot copy contents of this page