ಭಕ್ತರ ಅಸಹನೀಯ ವರ್ತನೆ: ಕೊಟ್ಟಿಯೂರಿನಲ್ಲಿ ಆನೆಗಳ ಕಾದಾಟ

ಕೊಟ್ಟಿಯೂರ್: ಭಕ್ತಜನರ ಅಸಹನೀಯ ವರ್ತನೆ ಹಿನ್ನೆಲೆಯಲ್ಲಿ ಕೊಟ್ಟಿಯೂರಿನಲ್ಲಿ ಆನೆಗಳು ಪರಸ್ಪರ ಕಚ್ಚಾಟ ನಡೆಸಿರುವುದು ಆತಂಕಕ್ಕೆ ಕಾರಣವಾಯಿತು. ಕೊಟ್ಟಿಯೂರಿನ ಪಾರ್ವತಿ ದೇವಿಯ ವಿಗ್ರಹವನ್ನು ಹೊತ್ತೊಯ್ಯುವ ತಕ್ಕಾವಿಳ ವಿಷ್ಣುನಾರಾಯಣನ್ ಎಂಬ ಹೆಸರಿನ ಆನೆ ಹಾಗೂ ಪೆರುಮಾಳ್‌ರ ವಿಗ್ರಹವನ್ನು ಕೊಂಡೊಯ್ಯುವ ಕೊಡುಮನ್ ಶಿವ ಎಂಬ ಹೆಸರಿನ ಆನೆಗಳು ಪರಸ್ಪರ ಕಾದಾಡಿ ಗಾಯವುಂಟುಮಾಡಿಕೊಂಡಿವೆ. ಎರಡು ಆನೆಗಳನ್ನು ಕೊಟ್ಟಿಯೂರು ದೇವಸ್ಥಾನದ ಸಮೀಪ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 9 ಗಂಟೆ ವೇಳೆ ಇಲ್ಲಿ ಆನೆಗಳು ಪರಸ್ಪರ ಕಾದಾಡಿಕೊಂಡಿವೆ. ಬಳಿಕ ಮಾವುತರು ತಲುಪಿ ಆನೆಗಳನ್ನು ಶಾಂತಗೊಳಿಸಿದ್ದಾರೆ.

ಇಲ್ಲಿಗೆ ತಲುಪುವ ಭಕ್ತರು ಆನೆಗಳನ್ನು ಸ್ಪರ್ಷಿಸಿ ಅವುಗಳಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದೇ ಇದಕ್ಕೆ ಕಾರಣವೆಂದು ದೂರಲಾಗುತ್ತಿದೆ.

RELATED NEWS

You cannot copy contents of this page