ಕಾಸರಗೋಡು: ಮೋದಿ ಸರಕಾರದ 12 ವರ್ಷದ ಆಡಳಿತ ದೇಶದ ಅಭಿವೃದ್ಧಿರಂಗದ ಸುವರ್ಣ ಕಾಲವಾಗಿದೆ ಎಂದು ಬಿಜೆಪಿ ವಲಯಾಧ್ಯಕ್ಷ ಕೆ. ಶ್ರೀಕಾಂತ್ ನುಡಿದರು. ಕೇರಳದ ಸಮಸ್ತ ವಲಯಗಳಲ್ಲೂ ಪ್ರಯೋಜನಪ್ರದ ವಾದ ಅಭಿವೃದ್ಧಿ ಮಾದರಿಗಳನ್ನು ಸೃಷ್ಟಿಸಲು ಮೋದಿ ಸರಕಾರಕ್ಕೆ ಸಾಧ್ಯವಾಗಿದೆ ಎಂದು ಕಾಸರಗೋಡಿ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ನುಡಿದರು.
ಯುಪಿಎ ಸರಕಾರದ ಕಾಲದಲ್ಲಿ ರೈಲ್ವೇ ಅಭಿವೃದ್ಧಿಗೆ ಕೇರಳಕ್ಕೆ ಲಭಿಸಿರುವುದು 372 ಕೋಟಿ ರೂ. ಆಗಿತ್ತು. ಇದೇ ವೇಳೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 3,042 ಕೋಟಿ ರೂ. ಮಂಜೂರು ಮಾಡಿದೆ. ರಾಜ್ಯದಲ್ಲಿ ರೈಲ್ವೇ ವಿದ್ಯುತ್ತೀಕರಣಕ್ಕೆ 100 ಶೇಕಡಾ ಪೂರ್ತಿಯಾಗಿದೆ. ಯುಪಿಎ ಸರಕಾರದ 10 ವರ್ಷದ ಕಾಲಾವಧಿಯಲ್ಲಿ ಕೇರಳಕ್ಕೆ ಕೇಂದ್ರದ ಗ್ರಾಂಟ್-ಇನ್- ಎಯ್ಡ್ ಕೇವಲ 25,629.7 ಕೋಟಿ ರೂ. ಲಭಿಸಿದ್ದರೆ 2014-2024 ಕಾಲಾವಧಿಯಲ್ಲಿ ಎನ್ಡಿಎ ಸರಕಾರ ಕೇರಳಕ್ಕೆ ಗ್ರಾಂಟ್-ಇನ್- ಎಯ್ಡ್ ಆಗಿ 1,43,117 ಕೋಟಿ ರೂ. ನೀಡಿದೆ. ಕೇರಳದ ಅಭಿವೃದ್ಧಿಗಾಗಿ 3.13 ಲಕ್ಷ ಕೋಟಿ ರೂ. ನರೇಂದ್ರ ಮೋದಿ ಸರಕಾರ ಮಂಜೂರು ಮಾಡಿದೆ ಎಂದು ಅವರು ನುಡಿದರು.
ಕುಡಿಯುವ ನೀರು, ವಸತಿ, ವಿದ್ಯುತ್, ಜನ್ಧನ್ ಬ್ಯಾಂಕ್ ಖಾತೆಗಳು, ಪ್ರಧಾನಮಂತ್ರಿ ವಿಮೆ ಯೋಜನೆಗಳು, ಉಜ್ವಲ ಗ್ಯಾಸ್ ಸಂಪರ್ಕ ಮೊದಲಾದ ಜನಕ್ಷೇಮ ಯೋಜನೆಗಳು ನರೇಂದ್ರ ಮೋದಿ ಸರಕಾರ ಕೇರಳದಲ್ಲಿ ಜ್ಯಾರಿಗೊಳಿ ಸಿದೆ. 5 ಲಕ್ಷ ರೂ.ವರೆಗೆ ಉಚಿತ ದಾಖಲಾತಿ ಚಿಕಿತ್ಸೆ ಲಭ್ಯಗೊಳಿಸುವ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯೂ ಜಾಗತಿಕ ದಾಖಲೆ ಗಳಿಸಿದೆ ಎಂದು ಅವರು ನುಡಿದರು. 90 ಶೇಕಡಾವರೆಗೆ ಬೆಲೆ ಕಡಿತದಲ್ಲಿ ಔಷಧಿಗಳನ್ನು ಜನ್ ಔಷಧಿ ಕೇಂದ್ರಗಳ ಮೂಲಕ ಲಭ್ಯಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ. 2026 ಫೆಬ್ರವರಿವರೆಗೆ ಕೇರಳದಲ್ಲಿ 1,775 ಜನ್ ಔಷಧಿ ಕೇಂದ್ರಗಳನ್ನು ಆರಂಭಿಸಿರುವುದಾಗಿಯೂ ಶ್ರೀಕಾಂತ್ ತಿಳಿಸಿದರು.
ಪೆರಿಯದ ಕೇಂದ್ರೀಯ ವಿ.ವಿಯ ಮೂಲಭೂತ ಸೌಕರ್ಯ ಹೆಚ್ಚಿಸುವುದಕ್ಕಾಗಿ ವಿವಿಧ ಯೋಜನೆಗಳ ಮೂಲಕ 130 ಕೋಟಿ ರೂ. ಹೊರತಾಗಿ ಸಾಮಾಜಿಕ ನೀತಿ ಇಲಾಖೆ 15 ಕೋಟಿ ರೂ., ಅಲ್ಪಸಂಖ್ಯಾತ ಕ್ಷೇಮಕಾರ್ಯ ಇಲಾಖೆ ಮೂಲಕ 90 ಕೋಟಿ ರೂ. ಮಂಜೂರು ಮಾಡಲಾಗಿದೆ. ಅಕಾಡೆಮಿಕ್ ಅಗತ್ಯಗಳಿಗಾಗಿ ಕಳೆದ ವರ್ಷ 70 ಕೋಟಿ ರೂ. ಕೇಂದ್ರ ವಿ.ವಿಗೆ ಬೇಕಾಗಿ ನರೇಂದ್ರ ಮೋದಿ ಸರಕಾರ ನೀಡಿದೆ. ಕಾಸರಗೋಡು ರೈಲ್ವೇ ನಿಲ್ದಾಣವನ್ನು ಅಮೃತ್ ಯೋಜನೆಯಲ್ಲಿ ಒಳಪಡಿಸಿ ಉತ್ತಮ ಆಧುನಿಕ ರೈಲ್ವೇ ಸ್ಟೇಷನ್ ಆಗಿ ಬದಲಿಸಲಾಗಿದೆ. ಕಾಞಂಗಾಡ್ ಸಹಿತದ ರೈಲ್ವೇ ನಿಲ್ದಾಣಗಳ ಅಭಿವೃದ್ಧಿಗೂ ಧನ ಸಹಾಯ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯನ್ನು ಕೂಡಾ ಕೇಂದ್ರ ಸರಕಾರ ಪರಿಗಣಿಸಿದ ಎಂದು ಶ್ರೀಕಾಂತ್ ನುಡಿದರು.





