ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಮಜಲ್ ರಸ್ತೆಯನ್ನು ಸಂಚಾರಯೋಗ್ಯ ಗೊಳಿಸಬೇಕೆಂದು ಪಂಚಾಯತ್ ಉಪಾಧ್ಯಕ್ಷೆ ಅರ್ಫಾನಾ ನಜೀಬ್ ಮುಖ್ಯಮಂತ್ರಿ ವಿ.ಡಿ. ಸತೀಶನ್, ಲೋಕೋಪಯೋಗಿ ಇಲಾಖೆ ಸಚಿವ ಪಿ.ಕೆ. ಬಶೀರ್, ಚೀಫ್ ಇಂಜಿನಿಯರ್, ಜನಪ್ರತಿನಿಧಿಗಳು ಎಂಬಿವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.
ಕಳೆದ ೮ ವರ್ಷದಿಂದ ದುರಸ್ತಿ ನಡೆಸದೆ ಉಪೇಕ್ಷಿಸಿರುವ ರಸ್ತೆ ಅಪಘಾತ ಭೀತಿಯೊಡ್ಡುತ್ತಿದೆ. ವಿದ್ಯಾರ್ಥಿಗಳು, ವೃದ್ದರು, ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿಯ ಅಭಾವ ರಸ್ತೆಯನ್ನು ಶೋಚನೀಯಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಜಲ್ ನಿವಾಸಿಗಳ ಹಲವು ಕಾಲದ ಬೇಡಿಕೆಗೆ ಶೀಘ್ರವೇ ಪರಿಹಾರ ಕೈಗೊಳ್ಳಬೇಕೆಂದು, ರಸ್ತೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.






