ರಾಜ್ಯದಲ್ಲಿ ವಿವಿಧ ರೋಗ ವ್ಯಾಪಕಗೊಂಡಿರುವಾಗ ಜಿಲ್ಲೆಯ ವಿವಿಧೆಡೆ ನೊಣಗಳ ಹಾವಳಿ

ಕಾಸರಗೋಡು: ರಾಜ್ಯದಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ವ್ಯಾಪಕಗೊಂಡ ಬಗ್ಗೆ ವರದಿಯಾಗುತ್ತಿರುವ ಮಧ್ಯೆಯೇ ಕಾಸರಗೋಡಿನ ವಿವಿಧೆಡೆ ರೋಗ ಹರಡುವ ಭೀತಿ ಹುಟ್ಟಿಕೊಂಡಿದೆ. ಮಳೆಗಾಲ  ಆರಂಭಗೊಂಡೊಡನೆ ಆಹಾರ ವಸ್ತುಗಳನ್ನು ಮಾರಾಟ ನಡೆಸುವ ಸಂಸ್ಥೆಗಳಲ್ಲ್ಲಿ  ನೊಣಗಳ ಹಾವಳಿ ತೀವ್ರಗೊಂಡಿದೆ.  ಮೀನು ಮಾರುಕಟ್ಟೆ ಸಹಿತ ಮಾಂಸದಂಗಡಿಗಳಲ್ಲೂ ನೊಣಗಳು ತುಂಬಿಕೊಂಡಿರುವುದು ಕಂಡುಬರುತ್ತಿದೆ. ಈ ನೊಣಗಳನ್ನು ಅಲ್ಪವಾದರೂ ಇಲ್ಲದಾಗಿಸಬಹುದಾದ ನೊಣ ನಾಶಕದಂತಹ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದಿರುವುದೇ ಮಾರುಕಟ್ಟೆ ಸಹಿತ ವಿವಿಧೆಡೆ ಸಮಸ್ಯೆ ತೀವ್ರಗೊಳ್ಳಲು ಕಾರಣವಾಗಿದೆ. ಇದೇ ವೇಳೆ ಇದೆಲ್ಲಾ ತಿಳಿದಿದ್ದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಕೊಂಡಿದೆಯೆಂದು ಆರೋಪ ಕೇಳಿಬರುತ್ತಿದೆ.

ಜ್ವರ, ವಾಂತಿ ಬೇಧಿ ಸಹಿತ ಅಸೌಖ್ಯ ವ್ಯಾಪಕಗೊಂಡಿರುವ ಸಮಯದಲ್ಲೇ ಮೀನು, ಮಾಂಸ ಸಹಿತ ಆಹಾರ ವಸ್ತುಗಳನ್ನು ಮಾರಾಟ ನಡೆಸುವ ಸಂಸ್ಥೆಗಳಲ್ಲಿ  ರೋಗ  ಹರಡುವ ನೊಣ, ಸೊಳ್ಳೆಗಳು ತೀವ್ರಗೊಂಡಿದೆ. ರಾಜ್ಯದಲ್ಲಿ ಗಂಭೀರವಾದ ಶಿಗೆಲ್ಲಾ, ನಿಪಾ ಸಹಿತ ರೋಗಗಳು ಕಾಣಿಸಿಕೊಂಡಿರುವಾಗ ಜಿಲ್ಲೆಯಲ್ಲಿ ಆಹಾರ ಇಲಾಖೆ ಪರಿಶೀಲನೆ ಚುರುಕುಗೊಳಿಸಬೇಕೆಂಬ ಬೇಡಿಕೆಯೂ ಸಾರ್ವಜನಿಕರ ಭಾಗದಿಂದ ಕೇಳಿಬರುತ್ತಿದೆ. ಇದೇ ವೇಳೆ ಪರಿಶೀಲನೆ ತೀವ್ರಗೊಳಿಸುವಂತೆ ಆಹಾರ ಸುರಕ್ಷಾ ಇಲಾಖೆಗೆ ಆರೋಗ್ಯ ಸಚಿವ ಕೆ. ಮುರಳೀಧರನ್ ನಿರ್ದೇಶಿಸಿದ್ದಾರೆ. ಆಹಾರ ವಸ್ತುಗಳನ್ನು ಮಚ್ಚಿಡದೆ ಪ್ರತಿರೋಧ ಕ್ರಮಗಳನ್ನು ಪಾಲಿಸದವರ ವಿರುದ್ಧ  ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page