ಕುಂಬಳೆ: ಕವಿ ನಾಡೋಜ ಕಯ್ಯಾರರು ಕ್ರಾಂತಿ ಮತ್ತು ಕರೆಯ ಅನನ್ಯ ರೂಪಗಳಲ್ಲಿ ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಬರೆದವರು. ಸ್ವಾತಂತ್ರö್ಯ ಹೋರಾಟ, ಕನ್ನಡ ಏಕೀಕರಣ, ವಿಲಿನೀಕರಣ ಚಳುವಳಿಗಳÀ ಬಹು ವಿಧದ ನೇತೃತ್ವ ವಹಿಸಿದ, ಕರಾವಳಿಯ ಕನ್ನಡ ಪ್ರಜ್ಞೆಯ ಪ್ರತೀಕ. ಕಯ್ಯಾರರ ಬದುಕು-ಕೊಡುಗೆಗಳು ಅತ್ಯಮೂಲ್ಯವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ನಿನ್ನೆ ಕಯ್ಯಾರು ಕೊಕ್ಕೆಚಾಲು ಕಾಮಿಲ್ ಶಾಲಾ ವಠಾರದಲ್ಲಿ ನಡೆದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಯ್ಯಾರರು ತಮ್ಮ ಸಾಹಿತ್ಯ ಪ್ರಜ್ಞೆಯ ಪ್ರತೀಕವಾಗಿ ಸಮಾಜ ಕಟ್ಟಿದವರು. ನೆಲ, ಜಲ, ಧನ, ಸಂಸ್ಕೃತಿಗಳನ್ನು ಬೆಸೆದು ಬದುಕಿದ ಕನ್ನಡದ ಕವಿ ರಾಷ್ಟçದ ವಿಶಾಲ ದೃಷ್ಟಿಯ ಮತ್ತಿನ ಮಣಿಯಾಗಿದ್ದವರು. ಅವರ ನೆನಪಲ್ಲಿ ನೀಡಲಾಗುವ ಪ್ರಶಸ್ತಿ ಬಸವರಾಜ್ ಎಸ್ ಹೊರಟ್ಟಿ ಹಾಗೂ ಎಟಿಎಸ್ ಆಡಳಿತ ನಿರ್ದೇಶಕ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರುಗಳಿಗೆ ಪ್ರದಾನಗೈಯ್ಯುತ್ತಿರುವುದು ಶ್ರೇಷ್ಠ ಕಾರ್ಯ ಎಂದವರು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯÁಗಿ ಉಪಸ್ಥಿತರಿದ್ದ ಶಾಸಕ ಎಕೆಎಂ ಅಶ್ರಫ್ ಕನ್ನಡ ಭಾಷೆ, ಸಂಸ್ಕೃತಿಯ ಪ್ರೇಮ ತನ್ನಲ್ಲಿ ಒಡಮೂಡಲು ಪದವಿ ತರಗತಿಯಲ್ಲಿ ಅಧ್ಯಯನ ನಡೆಸಿದ್ದ ಕಯ್ಯಾರರ ವಿವಿಧ ಸಾಹಿತ್ಯ ಬರಹಗಳೇ ಕಾರಣ. ಹೋರಾಟಗಾರರಾಗಿ ನ್ಯಾಯಯುತ ಹಕ್ಕುಗಳಿಗೆ ಅವರು ತೋರಿಸಿದ್ದ ಧೀಮಂತಿಕೆಯ ಧೈರ್ಯವೇ ತನಗೂ ಈಗ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಲು ಪ್ರೇರಣೆಯಾಯಿತು ಎಂದು ನೆನಪಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅವರು, ಕಾಸರಗೋಡಿನ ಕನ್ನಡ ಅಸ್ಮಿತೆ ನಿಜವಾಗಿಯೂ ಸ್ತುತ್ಯರ್ಹವಾದುದು. ಇಲ್ಲಿಯ ಜನರ ಶುದ್ಧ ಭಾಷಾಪ್ರೇಮ ಅಸದೃಶ್ಯವಾಗಿ ಕರ್ನಾಟಕಕ್ಕೂ ಮಾದರಿಯಾಗುವಂತದ್ದು. ನಾಡೋಜ ಕಯ್ಯಾರರ ಹೆಸರಲ್ಲಿ ತನಗೆ ಬಂದಿರುವ ಪ್ರಶಸ್ತಿ ಭಾಷಾ ಸೇವೆಗೆ ತನ್ನನ್ನು ಪ್ರೇರೇಪಿಸಲು ದಾರಿಮಾಡಿಕೊಟ್ಟಿದೆ ಎಂದರು. ಡಾ.ಮೂಡಂಬೈಲು ರವಿ ಶೆಟ್ಟಿ ಮಾತನಾಡಿ ಕನ್ನಡ ಭಾಷೆ, ಸಂಸ್ಕೃತಿಗಳ ಮಹತ್ವ, ಮೌಲ್ಯಗಳು ವಿದೇಶದಲ್ಲಿದ್ದಾಗ ಹೆಚ್ಚು ಹೃದಯಕ್ಕೆ ಹತ್ತಿರವಾಗುತ್ತದೆ. ಕಯ್ಯಾರರಂತಹ ಸಾಧಕರ ಪ್ರೇರಣದಾಯಿ ಬರಹಗಳು ಜನರ ಉಸಿರಾದಾಗ ನಾಡು ಸುಭಿಕ್ಷವಾಗುತ್ತದೆ ಎಂದರು.
ಈ ಸಂದರ್ಭ ಶಿವಾನಂದ ಕೋಟ್ಯಾನ್ ಕಟಪಾಡಿ ರಚಿಸಿದ ‘ಪರಂಪರೆಯ ಪಯಣ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬಿಡುಗಡೆಗೊಳಿಸಿದರು. ಡಾ. ಪ್ರಸನ್ನ ರೈ ಕಲ್ಲಕಳಿಯ ಇವರು ಕಯ್ಯಾರರ ಹಾಡುಗಳ ಗಾಯನ ನಡೆಸಿದರು.
ಕಯ್ಯಾರು ಚರ್ಚಿನ ಧರ್ಮಗುರು ರೆ.ಫಾ. ವಿಶಾಲ್ ಮೋನಿಶ್, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನಿಸ ಸಲೀಂ, ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಂಜೇಶ್ವರ ಬ್ಲಾಕ್ ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ್ ರೈ, ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನಾ ಝಡ್.ಎ.ಕಯ್ಯಾರ್, ಪೈವಳಿಕೆ ಪಂ. ಸದಸ್ಯೆ ಪ್ರಿನ್ಸಿ ಡಿ’ಸೋಜಾ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅತಿಥಿಗಳಾಗಿದ್ದರು.
ಸಾಮಾಜಿಕ ಕಾರ್ಯಕರ್ತ ದೀಪಕ್ ವಿ.ಕೆ, ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಪ್ರಗತಿಪರ ಕೃಷಿಕ ರಾಮಣ್ಣ ಅತ್ತಾರ್, ನಾಟಿ ವೈದ್ಯ ಮೊಹಮ್ಮದ್ ಪರಂಬಳ ಇವರಿಗೆ ಗೌರವಾರ್ಪಣೆ ನಡೆಯಿತು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕರ್ನಾಟಕ ಗಮಕ ಕಲಾಪರಿಷತ್ತು, ಕಾಸರಗೋಡು ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ಮಂಜೇಶ್ವರ ಬ್ಲಾಕ್ ಪಂ. ಮಾಜಿ ಸದಸ್ಯರಾದ ಬೇಬಿ ಶೆಟ್ಟಿ, ಪ್ರಸಾದ್ ರೈ ಕಯ್ಯಾರ್, ಕಾಮಿಲ್ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಮೊಯ್ದೀನ್ ಕುಂಞÂ್ಞ ಮಾಸ್ತರ್ ಉಪಸ್ಥಿತರಿದ್ದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪುರುಷೋತ್ತಮ ಭಟ್.ಕೆ. ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ನಿರೂಪಿಸಿದರು. ವಿವಿದs ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.







