ನಿಶ್ಚಿತ ಹೆಜ್ಜೆಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆ ರಕ್ಷಣೆಯಲ್ಲಿ ಸಂಘ ಕೆಲಸ ಮಾಡಿದೆ- ಮುಕುಂದ ಸಿ.ಆರ್.

ಕಾಸರಗೋಡು: ಕಳೆದ ೧೦೦ ವರ್ಷಗಳಲ್ಲಿ ಸಂಘವು ನಿಶ್ಚಿತ ಹೆಜ್ಜೆ ಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆಯ ಸಂರಕ್ಷಣೆ ಯಲ್ಲಿ ಸಂಘ ಕೆಲಸ ಮಾಡಿದೆ ಎಂಬು ದಾಗಿ ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ್ ಮುಕುಂದ ಸಿ.ಆರ್. ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ನಿನ್ನೆ ಸಂಜೆ ಕಾಸರ ಗೋಡುನಲ್ಲಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮೂಲ ಸನಾತನ ಮೌಲ್ಯ ಗಳ ಆಳವಾದ ಅಧ್ಯಯನವನ್ನು ಕಂಡು ಕೊಂಡ ಚಿಂತಕರು ನಾಗರೀಕತೆಯನ್ನು ಹೇಗೆ ಸಂರಕ್ಷಿಸಬೇಕೆAಬ ಜಾಗೃತಿ ಮೂಡಿಸುವಲ್ಲಿಯೂ, ವ್ಯಕ್ತಿ ನಿರ್ಮಾ ಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸಮಾಜ ಪರಿವರ್ತನೆಯ ಎಲ್ಲಾ ವಲಯದಲ್ಲೂ ಸಂಘ ಬದಲಾವಣೆ ತರುವಲ್ಲಿ ಕೆಲಸ ಮಾಡಿದೆ.  ಸಮಾಜದಲ್ಲಿ ತಳಮಟ ್ಟದಲ್ಲಿ ಆಗುವ ಬದಲಾವಣೆಯ ಸಂಕಲಿತ ರೂಪವೇ  ಹಿಂದೂ ಸಮಾಜದ ಪರಿವರ್ತನೆಯಲ್ಲಿ ಪ್ರಧಾನವಾಗಿದೆ. ರಾಷ್ಟ್ರದ ಬಗ್ಗೆ, ಸಮಾಜದ ಬಗ್ಗೆ ನಮಗಿರುವ ಭಾವನೆಯೇ ನಮ್ಮ ಮೂಲ ಬಂಡವಾಳವಾಗಿದೆ.  ಪ್ರಬುದ್ಧರಾದ ಎಲ್ಲಾ ಬಂಧುಗಳು ಜೊತೆಯಾಗಿ ಪರಿವರ್ತನೆಗಾಗಿ ಸಮಾಜದ ಶಕ್ತಿಯಾಗಿ, ಸಾಮಾಜಿP Àವಾಗಿ ನಾಗರೀಕತೆಯನ್ನು ಉಳಿಸುವ ಕೆಲಸದಲ್ಲಿ ಕೈಜೋಡಿಸಬೇಕೆಂದರು.
ಸAವಾದದಲ್ಲಿ ಸಂಘದ ನೋಂ ದಣಿ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ಬರುವ ಟೀಕೆಗೆ ಉತ್ತರಿಸಿ ಕಳೆದ ೧೦೦ ವರ್ಷಗಳಲ್ಲಿ ಸಂಘವು ಯಾರ ಮುಂದೆಯೂ ಸಹಾಯಕ್ಕಾಗಿ ಕೈ ಚಾಚಿಲ್ಲ, ಗುರುದಕ್ಷಿಣೆಯಾಗಿ ಲಭಿಸುವ ಸಮರ್ಪಣೆಯೇ ಪ್ರಧಾನ ಆದಾಯವಾಗಿದೆ. ಸಮಾಜದ ಮಾಹಾಪಿಡಗು ಮಾದಕ ವಸ್ತುಗಳ ಬಳಕೆಯನ್ನು ಅಳಿಸಿ ಹಾಕುವಲ್ಲಿ ಸಮಾಜವು ಜೊತೆಯಾಗಿ ಪ್ರಯತ್ನಿಸಬೇಕು ಎಂದರು.
ಪ್ರಬುದ್ಧ ಭಾರತ್ ಕಾರ್ಯ ಕ್ರಮದಲ್ಲಿ ಜಿಲ್ಲೆಯ ವಿವಿಧ ವಲಯದ ಆಹ್ವಾನಿತರು ಭಾಗವಹಿಸಿದರು. ಕಣ್ಣೂರು ವಿಭಾಗ್ ಸಂಘಚಾಲಕ್ ನ್ಯಾಯವಾದಿ ಸಿ.ಕೆ.ಶ್ರೀನಿವಾಸನ್,  ಜಿಲ್ಲಾ ಕಾರ್ಯವಾಹ್ ಪ್ರಭಾಕರನ್ ಮಾಸ್ಟರ್ ಉಪಸ್ಥಿತರಿದ್ದರು. ಕೇರಳ ಉತ್ತರ ಪ್ರಾಂತ ಸಹಕಾರ್ಯವಾಹ ಪಿ.ಪಿ.ಸುರೇಶ್ ಬಾಬು, ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕ¯Ä್ಲ ಭಾಗವಹಿಸಿದರು.

You cannot copy contents of this page