ದುರಂತ ಭೀತಿ ಹಿನ್ನೆಲೆ: ಮುಳ್ಳೇರಿಯದಲ್ಲಿ ಸರಕಾರಿ ಮದ್ಯದಂಗಡಿ ಆರಂಭಿಸಲು ಸಚಿವರಿಗೆ ಮನವಿ

ಮುಳ್ಳೇರಿಯ: ಊರಲ್ಲಿ ಮದ್ಯದಂಗಡಿ ಬೇಕೆಂಬ ಬೇಡಿಕೆ ಒಡ್ಡಿದಾಗ ಕೆಲವರು ಇದರಲ್ಲಿ ವಿಶೇಷತೆ ಕಾಣಬಹುದು. ಆದರೆ ಮುಳ್ಳೇರಿಯದ ಒಂದು ವಿಭಾಗ  ಜನರು ಮುಳ್ಳೇರಿಯ ದಲ್ಲಿ ಬಿವರೇಜಸ್ ಕಾರ್ಪೊರೇಶನ್‌ನ ಮದ್ಯದಂಗಡಿ ಬೇಕೆಂದು  ಆಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಅಬಕಾರಿ ಸಚಿವ ಎಂ. ಲಿಜುರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಶರಾಬು ನಿಶೇಧಿಸಿದಾಗ ಮುಳ್ಳೇರಿಯದಲ್ಲಿ ಅನಧಿಕೃತ ಮದ್ಯ ಮಾರಾಟ, ಸಮಾಜ ಕಂಟಕರ ಹಾವಳಿ ಹೆಚ್ಚಾಗಿತ್ತು. ಆ ಬಳಿಕ ಮುಳ್ಳೇರಿಯದಲ್ಲಿ ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿ ಆರಂಭಗೊಂಡ ಬಳಿಕ ಇಲ್ಲಿ ಈ ರೀತಿಯ ದುರಂತ ಕಡಿಮೆ ಯಾಗಿತ್ತು. ಈಗ ಇಲ್ಲಿದ್ದ ಬಿವರೇಜಸ್ ಕಾರ್ಪೊರೇಶನ್‌ನ ಮದ್ಯದಂಗಡಿಯನ್ನು ಸ್ಥಳಾಂತರಿಸಲಾಗಿದೆ. ಜೂನ್ 2ರಿಂದ ಈ ಅಂಗಡಿ ಬದಿಯಡ್ಕಕ್ಕೆ ಸ್ಥಳಾಂತರ ಗೊಂಡಿದೆ.

ಕಾರಡ್ಕ, ಬೆಳ್ಳೂರು, ಕುಂಬ್ಡಾಜೆ, ದೇಲಂಪಾಡಿ, ಮುಳಿಯಾರು ಎಂಬ ಮಲೆನಾಡು ಪಂಚಾಯತ್‌ಗಳ ಮದ್ಯಪಾನಿಗಳು ಆಶ್ರಯಿಸುತ್ತಿದ್ದ ಈ ಮದ್ಯದಂಗಡಿ ಇಲ್ಲದಾಗುವಾಗ ಅವರು ಇತರ ರೀತಿಯಲ್ಲಿ ಮದ್ಯ ಸೇವಿಸಲು ತೊಡಗುತ್ತಾರೆ. ಕಳ್ಳಬಟ್ಟಿ ಕೂಡಾ ಹೆಚ್ಚಲು ಸಾಧ್ಯವಿದೆ. ಕರ್ನಾಟಕದಿಂದ ತಂದು ಮಾರಾಟ ಮಾಡುವ ಮಂದಿ ಹೆಚ್ಚಾಗಲಿದ್ದಾರೆ. ಇದೆಲ್ಲ ಮದ್ಯ ದುರಂತಕ್ಕೆ ಕಾರಣವಾದೀತು ಎಂದು ಸ್ಥಳೀಯರಲ್ಲಿ ಕೆಲವರು ಭೀತಿ ವ್ಯಕ್ತಪ ಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಳ್ಳೇರಿ ಯದಲ್ಲಿ ಸಣ್ಣದಾದ ಮದ್ಯದಂಗಡಿ ಯಾದರೂ ತೆರೆಯಲು ಸರಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿ ದ್ದಾರೆ. ರವಿಚಂದ್ರ, ಅಶೋಕ್ ಕುಮಾರ್, ಅಭಿಜಿತ್, ಶಿನೋದ್ ಕುಮಾರ್ ಎಂಬವರು ಈ ಬಗ್ಗೆ ಸಚಿವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.

You cannot copy contents of this page